ಬೆಂಗಳೂರು: ‘ಕರ್ನಾಟಕ ಮುಸ್ಲಿಂ ಅಡ್ವೋಕೇಟ್ ಫೋರಂ (ರಿ.)’ ಬೆಂಗಳೂರು ಇದರ ಚುನಾವಣೆಯಲ್ಲಿ ವಕೀಲರಾದ ಜನಾಬ್ ಅಡ್ವೋಕೇಟ್ ಮುಝಫ್ಫರ್ ಅಹ್ಮದ್ ಅವರು ಭರ್ಜರಿ ಜಯಗಳಿಸಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
30+ ವರ್ಷಗಳ ಕಾನೂನು ಕ್ಷೇತ್ರದ ಸುದೀರ್ಘ ಅನುಭವ:
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಡ್ವೋಕೇಟ್ ಮುಝಫ್ಫರ್ ಅಹ್ಮದ್ ಅವರು ಕ್ರಿಮಿನಲ್ ಪ್ರಕರಣಗಳಲ್ಲಿ 30ಕ್ಕೂ ಹೆಚ್ಚು ವರ್ಷಗಳ ಅಪಾರ ಅನುಭವ ಹೊಂದಿರುವ ಹಿರಿಯ ವಕೀಲರೂ ಹಾಗೂ ಕ್ರಿಮಿನಲ್ ಪ್ರಕರಣಗಳಿಂದ ಹಿಡಿದು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತಮ್ಮ ಕಕ್ಷಿದಾರರ ಪರವಾಗಿ ಯಶಸ್ವಿಯಾಗಿ ವಾದ ಮಂಡಿಸಿದ ಸುದೀರ್ಘ ಇತಿಹಾಸ ಇವರಿಗಿದೆ.
ವಿಶೇಷವಾಗಿ ದೇಶದ ಪ್ರಮುಖ ತನಿಖಾ ಸಂಸ್ಥೆಗಳಾದ ಎನ್‌ಐಎ , ಸಿಬಿಐ ಹಾಗೂ ಇತರ ರಾಜ್ಯ ಮಟ್ಟದ ಪ್ರಮುಖ ತನಿಖಾ ಸಂಸ್ಥೆಗಳು ದಾಖಲಿಸುವ ಸಂಕೀರ್ಣ ಕಾನೂನು ಪ್ರಕರಣಗಳನ್ನು ನಿರ್ವಹಿಸುವಲ್ಲಿ ಇವರು ನಿಪುಣರಾಗಿದ್ದಾರೆ. ಕಾನೂನು ಕ್ಷೇತ್ರದ ಆಳವಾದ ಜ್ಞಾನ, ತಂತ್ರಗಾರಿಕೆ ಹಾಗೂ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ವಾದಿಸುವ ಇವರ ಸಾಮರ್ಥ್ಯವು ವಕೀಲ ಸಮುದಾಯದಲ್ಲಿ ಅಪಾರ ಗೌರವವನ್ನು ತಂದುಕೊಟ್ಟಿದೆ.
ಹೃತ್ಪೂರ್ವಕ ಶುಭಾಶಯಗಳ ಮಹಾಪೂರ:
ಈ ಪ್ರಚಂಡ ಗೆಲುವಿನ ಕುರಿತು ಸಂತಸ ವ್ಯಕ್ತಪಡಿಸಿರುವ ರಾಜ್ಯದ ಪ್ರಮುಖ ಮುಖಂಡರು, “ಈ ಗೆಲುವು ನಿಮ್ಮ ಸಮರ್ಥ ನಾಯಕತ್ವ, ಸೇವಾ ಮನೋಭಾವ ಮತ್ತು ವಕೀಲ ಸಮುದಾಯವು ನಿಮ್ಮ ಮೇಲಿಟ್ಟಿರುವ ಅಚಲ ವಿಶ್ವಾಸಕ್ಕೆ ಸಂದ ಗೌರವವಾಗಿದೆ. ನಿಮ್ಮ ಈ ಅಧಿಕಾರಾವಧಿಯಲ್ಲಿ ಕರ್ನಾಟಕ ಮುಸ್ಲಿಂ ಅಡ್ವೋಕೇಟ್ ಫೋರಂ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ, ವಕೀಲರ ಹಿತಾಸಕ್ತಿ ಹಾಗೂ ನ್ಯಾಯಪರ ಹೋರಾಟಕ್ಕೆ ಹೊಸ ಶಕ್ತಿ ಸಿಗಲಿ” ಎಂದು ಹಾರೈಸಿದ್ದಾರೆ.