ಕೂಳೂರು ಜುಮಾ ಮಸೀದಿಯಲ್ಲಿ SSF ಸಾಹಿತ್ಯ ಉತ್ಸವ: ಯುವ ವಕೀಲ ಮಹಮ್ಮದ್ ಅಸ್ಗರ್ ಶುಭಹಾರೈಕೆ

ಮಂಗಳೂರು: ಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ವತಿಯಿಂದ ಮಂಗಳೂರಿನ ಕೂಳೂರು ಜುಮಾ ಮಸೀದಿ ಆವರಣದಲ್ಲಿ ಆಯೋಜಿಸಲಾದ ಸಾಹಿತ್ಯ ಉತ್ಸವ ಕಾರ್ಯಕ್ರಮದಲ್ಲಿ ಯುವ ವಕೀಲರಾದ ಮಹಮ್ಮದ್ ಅಸ್ಗರ್ ಅವರು ಭಾಗವಹಿಸಿ ಶುಭ ಹಾರೈಸಿದರು.


ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಯುವ ಪ್ರತಿಭೆಗಳಿಗೆ ತಮ್ಮಲ್ಲಿರುವ ಸಾಮರ್ಥ್ಯ ಹಾಗೂ ಸೃಜನಶೀಲತೆಯನ್ನು ಅನಾವರಣಗೊಳಿಸಲು ಸಾಹಿತ್ಯೋತ್ಸವವು ಅತ್ಯಂತ ಮುಕ್ತ ಹಾಗೂ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇದು ನಿಜಕ್ಕೂ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ” ಎಂದು ಬಣ್ಣಿಸಿದರು.
ಮುಂದುವರಿದು ಮಾತನಾಡುತ್ತಾ, “ಸಾಹಿತ್ಯ, ಸೃಜನಶೀಲತೆ ಹಾಗೂ ಅಡಗಿರುವ ಯುವ ಪ್ರತಿಭೆಗಳಿಗೆ ಸೂಕ್ತ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮಗಳು ಇಂದಿನ ಯುವ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಹಾಗೂ ಅವರ ಭವಿಷ್ಯಕ್ಕೆ ಬಹಳ ಮಹತ್ವದ್ದಾಗಿವೆ” ಎಂದು ಅಭಿಪ್ರಾಯಪಟ್ಟರು.
ಅಂತೆಯೇ, ಯುವಜನತೆಯ ಪ್ರತಿಭೆಗೆ ವೇದಿಕೆ ನೀಡುವ ನಿಟ್ಟಿನಲ್ಲಿ ಇಂತಹ ಸುಂದರ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ತಂಡದ ಆಯೋಜಕರಿಗೆ ಮಹಮ್ಮದ್ ಅಸ್ಗರ್ ಅವರು ಹೃತ್ಪೂರ್ವಕ ಅಶುಭಾಶಯಗಳನ್ನು ತಿಳಿಸಿದರು.

