ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ನೂತನ ಪ್ರಧಾನ ಕಾರ್ಯದರ್ಶಿಯಾಗಿ ವಕೀಲರಾದ ಕಲಂದರ್ ಕೊಯಿಲ ಆಯ್ಕೆ
ಸಮಾಜಮುಖಿ ಚಿಂತನೆ, ಕಾಳಜಿ ಹಾಗೂ ನಿರಂತರ ಸಾಮಾಜಿಕ-ನ್ಯಾಯ ಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವಕೀಲರಾದ ವಕೀಲರಾದ ಕಲಂದರ್ ಕೊಯಿಲ ಅವರು ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು (R) ಸಂಸ್ಥೆಯ 2026-27ನೇ ಸಾಲಿನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಸಮಾಜದ ಕಷ್ಟ-ನಷ್ಟಗಳಿಗೆ ತಕ್ಷಣವೇ ಸ್ಪಂದಿಸುವ ಗುಣ,ಒಳ್ಳೆಯ ಕಾರ್ಯಗಳಿಗೆ ಮುಂಚೂಣಿಯಲ್ಲಿ ನಿಂತು ಬೆಂಬಲ ನೀಡುವ ಬದ್ಧತೆಯನ್ನು ಹೊಂದಿರುವ ಕಲಂದರ್ ಕೋಯಿಲ ಅವರ ಆಯ್ಕೆಗೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಜನರನ್ನು ಒಂದೇ ವೇದಿಕೆಯಡಿ ಸಂಘಟಿಸುವುದು, ತುರ್ತು ಸಂದರ್ಭಗಳಲ್ಲಿ ಸಹಾಯ ಹಸ್ತ ಚಾಚುವುದು, ಶಿಕ್ಷಣ ಮತ್ತು ಕಾನೂನು ನೆರವು ನೀಡುವುದು ಸೇರಿದಂತೆ ಹಲವು ಸಮಾಜಮುಖಿ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಬ್ಯಾರೀಸ್ ಸೆಂಟ್ರಲ್ ಕಮಿಟಿ ಸಂಸ್ಥೆಗೆ ಕಲಂದರ್ ಕೋಯಿಲ ಅವರ ನಾಯಕತ್ವವು ಇನ್ನಷ್ಟು ಶಕ್ತಿ ತುಂಬಲಿದೆ ಎಂದು ಆಡಳಿತ ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ.



