Ur Kannada News

ಬೇಲು ಸಿಕ್ಕಿದರೂ ತಪ್ಪಲಿಲ್ಲ ಜೈಲುವಾಸ,ಭರತ್ ಕುಮ್ಡೇಲು ಸಹಿತ 6 ಮಂದಿಗೆ ಗೂಂಡಾ ಕಾಯ್ದೆ ಜಡಿದ ಎಸ್.ಪಿ.

ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣದಲ್ಲಿ ಕೋಕಾ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದಿದ್ದರೂ, ಪ್ರಮುಖ ಆರೋಪಿಗಳಿಗೆ ಮಾತ್ರ ಜೈಲುವಾಸ ತಪ್ಪಿಲ್ಲ.

ಈ ಪ್ರಕರಣದಲ್ಲಿ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಬಂಧಿತರಾಗಿದ್ದ ಭರತ್ ಕುಮ್ಡೇಲು, ಶಿವಪ್ರಸಾದ್, ಪ್ರದೀಪ್, ಅಭಿನ ರೈ, ತೇಜಾಕ್ಷ, ರಂಜಿತ್ ಸೇರಿದಂತೆ ಒಟ್ಟು ಎಂಟು ಮಂದಿಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ಜಾಮೀನು ಮಂಜೂರು ಮಾಡಿತ್ತು. ಇದರಿಂದ ಆರೋಪಿಗಳು ಶೀಘ್ರವೇ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದರು.

ಆದರೆ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸರು ಜಡಿದಿರುವ ‘ಗೂಂಡಾ ಕಾಯ್ದೆ’ ಅಸ್ತ್ರ ಇವರಿಗೆ ಬಹುದೊಡ್ಡ ತಡೆಯಾಗಿದೆ.

ಗೂಂಡಾ ಕಾಯ್ದೆಗೆ ಒಳಗಾದ ಆರೋಪಿಗಳು:

 ಭರತ್ ಕುಮ್ಡೇಲು (38)

 ಶಿವಪ್ರಸಾದ್ (33)

 ಪ್ರದೀಪ್ (34)

 ಅಭಿನ ರೈ (32)

 ತೇಜಾಕ್ಷ (24)

 ರಂಜಿತ್ (35)

ಸದರಿ ಆರು ಮಂದಿ ಕಠಿಣ ಗೂಂಡಾ ಕಾಯ್ದೆಯ ನಿಯಂತ್ರಣದಲ್ಲಿರುವುದರಿಂದ, ಕೊಲೆ ಕೇಸ್‌ನಲ್ಲಿ ನ್ಯಾಯಾಲಯದಿಂದ ಬೇಲು ದೊರೆತರೂ ಸಹ ಜೈಲಿನಿಂದ ಹೊರಬರಲಾಗದೆ ಸದ್ಯಕ್ಕೆ ಕಸ್ಟಡಿಯಲ್ಲೇ ಮುಂದುವರಿಯಲಿದ್ದಾರೆ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *