ಶಾಲಾ ದಾಖಲೆಗಳ ಹೆಸರು ಬದಲಾವಣೆಗೆ ಹೆಡ್‌ಮಾಸ್ಟರ್‌ಗೆ ಅಧಿಕಾರವಿಲ್ಲ-ಸಿವಿಲ್ ಕೋರ್ಟ್ ಡಿಕ್ರಿಯೇ ಅಂತಿಮ –ಹೆಸರಿನಿಂದ ಗುರುತಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಹಕ್ಕು- ಹೈಕೋರ್ಟ್‌ನಿಂದ ತೀರ್ಪು
ಶಾಲಾ ದಾಖಲೆಗಳಲ್ಲಿ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಲ್ಲಿಸಲಾದ ಅರ್ಜಿಯನ್ನು ಇತ್ಯರ್ಥ ಮಾಡುವ ನ್ಯಾಯವ್ಯಾಪ್ತಿ ಸಿವಿಲ್ ಕೋರ್ಟ್‌ಗೆ ಇದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಹೆಸರು ಬದಲಾವಣೆ ಮಾಡಿಕೊಳ್ಳುವುದು ಮತ್ತು ಅದರ ಜೊತೆಗೆ ಗುರುತಿಸಿಕೊಳ್ಳುವುದು ವ್ಯಕ್ತಿಯ ಸಿವಿಲ್ ಹಕ್ಕು ಎಂದು ನ್ಯಾಯಪೀಠ ಹೇಳಿದೆ.
ಶಾಲಾ ದಾಖಲಾತಿಗಳಲ್ಲಿ ಹೆಸರು ಬದಲಾವಣೆ ಮಾಡುವ ಯಾವುದೇ ಅಧಿಕಾರ ಶಾಲಾ ಮುಖ್ಯಸ್ಥರಿಗೆ ಇಲ್ಲ. ಆದರೆ, ಈ ಕುರಿತಾಗಿ ಘೋಷಣಾತ್ಮಕ ಆದೇಶ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯ ತೀರ್ಮಾನಿಸಿದೆ.
ಪ್ರಕರಣದ ವಿವರ:
ಸಂಖ್ಯಾಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ತನ್ನ ಹೆಸರನ್ನು ಬೆಂಗಳೂರಿನ ಲಕ್ಷ್ಮಿ ಎನ್‌ಗೆ ಬದಲಾಗಿ ವೀಣಾ ಎನ್ ಎಂದು ಬದಲಾಯಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸಿವಿಲ್ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಪ್ರಕರಣ: ಲಕ್ಷ್ಮಿ ಎನ್. ವಿರುದ್ಧ ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, RFA 703/2026, Dated 17-09-2026

