Latest:
Ur Kannada News

ವಕೀಲರ ಮೇಲಿನ ಸರಣಿ ದೌರ್ಜನ್ಯ ಖಂಡಿಸಿ ಬೃಹತ್ ಹೋರಾಟ,ವಕೀಲರ ಘನತೆಗೆ ಧಕ್ಕೆಯಾದರೆ ಸಹಿಸಲ್ಲ, ವಕೀಲರ ಒಗ್ಗಟ್ಟು ಪ್ರದರ್ಶಿಸಲು ನಾರಾಯಣಸ್ವಾಮಿ ಜಿ ಅವರಿಂದ ವಕೀಲ ಮಿತ್ರರಿಗೆ ಜಾಗೃತ ಕರೆ

ಬೆಂಗಳೂರು: ರಾಜ್ಯಾದ್ಯಂತ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ ಹಾಗೂ ಅನ್ಯಾಯಗಳನ್ನು ಖಂಡಿಸಿ 03.11.2026ರ ಮಂಗಳವಾರದಂದು ರಾಜ್ಯವ್ಯಾಪಿ ಬೃಹತ್ ಮುಷ್ಕರ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯನ್ನು ಅತ್ಯಂತ ಒಗ್ಗಟ್ಟಿನಿಂದ ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಜಿ. ನಾರಾಯಣಸ್ವಾಮಿ ಅವರು ರಾಜ್ಯದ ಸಮಸ್ತ ವಕೀಲ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಈ ಕುರಿತು ನಾರಾಯಣಸ್ವಾಮಿ ಅವರು, ರಾಜ್ಯದ ಪ್ರತಿಯೊಂದು ತಾಲೂಕು ಮತ್ತು ಜಿಲ್ಲಾ ವಕೀಲರ ಸಂಘಗಳ ಗೌರವಾನ್ವಿತ ಪದಾಧಿಕಾರಿಗಳು ತಮ್ಮ ತಮ್ಮ ತಂಡಗಳನ್ನು ಸಮರ್ಪಕವಾಗಿ ಸಂಘಟಿಸಿಕೊಂಡು, ಪರಸ್ಪರ ಸಮನ್ವಯದೊಂದಿಗೆ ಈ ಹೋರಾಟವನ್ನು ಮುನ್ನಡೆಸಬೇಕು ಎಂದು ವಿನಂತಿಸಿದ್ದಾರೆ. ನಾವೆಲ್ಲರೂ ಬೇರೆ ಬೇರೆ ಪ್ರದೇಶ ಹಾಗೂ ಸಂಘಟನೆಗಳಿಗೆ ಸೇರಿದವರಾಗಿದ್ದರೂ, ‘ವಕೀಲರು’ ಎಂಬ ಒಂದೇ ವೃತ್ತಿಪರ ಗುರುತು ನಮ್ಮನ್ನು ಜೋಡಿಸುತ್ತದೆ. ಆದ್ದರಿಂದ ಯಾವುದೇ ವೈಯಕ್ತಿಕ, ರಾಜಕೀಯ ಅಥವಾ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ವಕೀಲ ಸಮುದಾಯದ ಏಳಿಗೆಗಾಗಿ ಪ್ರತಿಯೊಬ್ಬರೂ ಒಂದಾಗಿ ನಿಲ್ಲುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಪ್ರತಿಭಟನೆಯ ಮುಖ್ಯ ಉದ್ದೇಶ ಸರ್ಕಾರ, ಸಮಾಜ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಸ್ಪಷ್ಟವಾದ ಸಂದೇಶ ತಲುಪಿಸುವುದಾಗಿದೆ. ವಕೀಲರ ಗೌರವ, ಘನತೆ, ಸ್ವಾಭಿಮಾನ ಹಾಗೂ ಸುರಕ್ಷತೆಯನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಒಗ್ಗಟ್ಟಿನ ಮೂಲಕ ಸಾಬೀತುಪಡಿಸಬೇಕಿದೆ.

ಒಬ್ಬ ವಕೀಲನಿಗೆ ಅನ್ಯಾಯವಾದಾಗ ಇಡೀ ಸಮುದಾಯವೇ ಆತನ ಬೆನ್ನಿಗೆ ನಿಲ್ಲುವ ಶಕ್ತಿ ತೋರಿಸಿದಾಗ ಮಾತ್ರ ನಮ್ಮ ಧ್ವನಿಗೆ ನಿಜವಾದ ಬಲ ದೊರೆಯುತ್ತದೆ. ಹೀಗಾಗಿ 03.11.2026ರ ಮಂಗಳವಾರದಂದು ನಡೆಯುವ ಈ ರಾಜ್ಯವ್ಯಾಪಿ ಹೋರಾಟದಲ್ಲಿ ಎಲ್ಲ ವಕೀಲ ಮಿತ್ರರು ಸಕ್ರಿಯವಾಗಿ ಭಾಗವಹಿಸಿ, ವಕೀಲರ ಘನತೆ ಮತ್ತು ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕಾಗಿ ಅವರು ವಿನಂತಿಸಿಕೊಂಡಿದ್ದಾರೆ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *