Latest:
Ur Kannada News

ಸಾಧನೆಗೆ ಸಂದ ನೈಜ ಗೌರವ: ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ವಕೀಲ ಹಾಗೂ ಶಿಕ್ಷಣ ಪ್ರೇಮಿ ಎಂ.ಪಿ. ಅಬೂಬಕ್ಕರ್

ಒಬ್ಬ ವ್ಯಕ್ತಿ ಹಲವು ಸಾಧನೆಗಳು ಎಂಬ ಮಾತಿಗೆ ಪೂರ್ಣ ಉದಾಹರಣೆಯಂತಿರುವ ಪುತ್ತೂರಿನ ಹಿರಿಯ ವಕೀಲರು ಮತ್ತು ಶಿಕ್ಷಣ ಪ್ರೇಮಿ ಎಂಪಿ ಅಬೂಬಕ್ಕರ್ ರವರಿಗೆ ಇಂದು ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು , ಇದು ಅರ್ಹ ಸಾಧಕನಿಗೆ ಸಿಕ್ಕ ನೈಜ ಗೌರವವಾಗಿದೆ.

ವೃತ್ತಿಯಲ್ಲಿ ನ್ಯಾಯವಾದಿಯಾಗಿ, ಸಾಮಾಜಿಕ ನ್ಯಾಯಕ್ಕಾಗಿ ಧ್ವನಿಯೆತ್ತುತ್ತಲೇ,ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿ ಪ್ರವೃತ್ತಿಯಾಗಿ ಸಮಾಜದ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಇವರ ಕೊಡುಗೆ ಅಪಾರವಾಗಿದೆ, ಸುಮಾರು ಮೂರು ದಶಕಗಳ ಹಿಂದೆ ಪುತ್ತೂರಿನ ಮುರ ಎಂಬ ಗ್ರಾಮದಲ್ಲಿ ಎಂಪಿಎಂ ವಿದ್ಯಾಲಯ’ವನ್ನು ಸ್ಥಾಪಿಸಿದರು. ಅಂದು ಬಡ ಹಾಗೂ ಗ್ರಾಮೀಣ ಮಕ್ಕಳ ಪಾಲಿಗೆ ಆಕಾಶದ ನಕ್ಷತ್ರದಂತಿದ್ದ ಕಾನ್ವೆಂಟ್ ಮಾದರಿಯ ಶಿಕ್ಷಣವನ್ನು ಸಾಮಾನ್ಯರ ಕೈಗೆಟುಕುವಂತೆ ಮಾಡಿ, ನೂರಾರು ಮಕ್ಕಳ ಭವಿಷ್ಯದ ಬಾಗಿಲನ್ನೇ ತೆರೆದ ವಿದ್ಯಾತಪಸ್ವಿ ಇವರಾಗಿದ್ದಾರೆ.

ಅಬೂಬಕ್ಕರ್ ಅವರ ಬದುಕಿನ ಅತ್ಯಂತ ಹೆಮ್ಮೆಯ ಅಧ್ಯಾಯವೆಂದರೆ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ರೂಪಿಸಿದ ಅವರ ಆದರ್ಶ ಕುಟುಂಬದ ಹಾದಿ. ತಮ್ಮ ಮೂವರು ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿ ವೈದ್ಯಕೀಯ ಕ್ಷೇತ್ರದ ಎತ್ತರದ ಶಿಖರಕ್ಕೇರಿಸಿದ್ದಾರೆ; ಇವರ ಹಿರಿಯ ಪುತ್ರಿ ಚರ್ಮರೋಗ ತಜ್ಞೆಯಾಗಿ (MD Dermatology), ಎರಡನೇ ಪುತ್ರಿ ದಂತವೈದ್ಯಕೀಯ ಕ್ಷೇತ್ರದಲ್ಲಿ (MD Dental), ಹಾಗೂ ಮೂರನೇ ಪುತ್ರಿ ಮೂತ್ರಪಿಂಡ ರೋಗಗಳ ಚಿಕಿತ್ಸೆಯಲ್ಲಿ (DM Nephrology) ಉನ್ನತ ಪದವಿ ಪಡೆದು ಅಸಂಖ್ಯಾತ ಜನರ ಬದುಕಿನಲ್ಲಿ ಆರೋಗ್ಯದ ಬೆಳಕು ಚೆಲ್ಲುತ್ತಿದ್ದಾರೆ. ಅಂತೆಯೇ ಮತ್ತೊಬ್ಬ ಪುತ್ರ ಉದ್ಯಮಿಯಾಗಿ ಯಶಸ್ವಿ ಹಾದಿಯಲ್ಲಿದ್ದರೆ, ಕಿರಿಯ ಪುತ್ರ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಮುನ್ನಡೆಯುತ್ತಿದ್ದಾರೆ. ಕೇವಲ ಮಕ್ಕಳ ಆಸ್ತಿಯನ್ನು ಬೆಳೆಸುವುದಕ್ಕಿಂತ ಮಕ್ಕಳನ್ನೇ ಸಮಾಜದ ಆಸ್ತಿಯನ್ನಾಗಿ ಮಾಡಿದ ಇವರು ಮಾದರಿಯಾಗಿದ್ದಾರೆ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *