ಬಂಟ್ವಾಳ ವಕೀಲರ ಸಂಘದ ನೂತನ ಟೀ-ಶರ್ಟ್ ಅನಾವರಣ ಕಾರ್ಯಕ್ರಮ
ಬಂಟ್ವಾಳ:ಬಂಟ್ವಾಳ ವಕೀಲರ ಸಂಘದಲ್ಲಿ ನೂತನ ಟೀ-ಶರ್ಟ್ ಬಿಡುಗಡೆ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಪ್ರಾಯೋಜಕರಾಗಿ ಹಿರಿಯ ವಕೀಲರು ಹಾಗೂ ಮಾಜಿ ಅಧ್ಯಕ್ಷರಾದ ಉಮೇಶ್ ಕುಮಾರ್ ವೈ ಮತ್ತು ಸುರೇಶ್ ಪೂಜಾರಿ ಅವರು ಭಾಗವಹಿಸಿ ನೂತನ ಟೀ-ಶರ್ಟ್ ಅನಾವರಣಗೊಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ವಕೀಲರಾದ ಚಂದ್ರಶೇಖರ ಪುಂಚಮೆ ಅವರು ಎಲ್ಲರನ್ನೂ ಸ್ವಾಗತಿಸಿದರು.
ವೇದಿಕೆಯಲ್ಲಿ ಕ್ರೀಡಾ ಕಾರ್ಯದರ್ಶಿಗಳಾದ ವಿಜಯ್ ರಾಘವೇಂದ್ರ ಮತ್ತು ಸುದರ್ಶನ್ ಕುಮಾರ್ ಮುಳಿಯ, ಹಾಗೂ ತಂಡದ ನಾಯಕ ರವಿರಾಜ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಹಿರಿಯ ಹಾಗೂ ಯುವ ವಕೀಲರು ಉಪಸ್ಥಿತರಿದ್ದರು.


