Ur Kannada News

ಕರ್ನಾಟಕ ಮುಸ್ಲಿಂ ಅಡ್ವಕೇಟ್ಸ್ ಫೋರಂ ನೂತನ ಅಧ್ಯಕ್ಷ ಮುಜಫರ್ ಅಹ್ಮದ್ ಹಾಗೂ ಪದಾಧಿಕಾರಿಗಳಿಗೆ ಮಂಗಳೂರಿನಲ್ಲಿ ಸನ್ಮಾನ

ಮಂಗಳೂರು: ಕರ್ನಾಟಕ ಮುಸ್ಲಿಂ ಅಡ್ವಕೇಟ್ಸ್ ಫೋರಂ (ರಿ) ರಾಜ್ಯ ಮಟ್ಟಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹೈಕೋರ್ಟ್ ವಕೀಲರಾದ ಮುಜಫರ್ ಅಹ್ಮದ್ ಹಾಗೂ ನೂತನ ಪದಾಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಅಭಿನಂದನಾ ಮತ್ತು ಸನ್ಮಾನ ಕಾರ್ಯಕ್ರಮವು ಮಂಗಳೂರಿನ ಫಳ್ನೀರ್‌ನ ಅಲ್-ಎಹ್ಸಾನ್ ಮಸೀದಿಯ HIF ಆಡಿಟೋರಿಯಂನಲ್ಲಿ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲರು ಮತ್ತು ನೋಟರಿಯವರಾದ ಅಡ್ವೋಕೇಟ್ ಅಬ್ದುಲ್ ಅಝೀಜ್ ವಹಿಸಿದ್ದರು.

ಹಿರಿಯ ವಕೀಲರಾದ ಇಸ್ಮಾಯಿಲ್ ನೆಲ್ಯಾಡಿ ಅವರು ಸ್ವಾಗತ ಭಾಷಣ ಮಾಡಿದರು. ತಮ್ಮ ಸ್ವಾಗತ ಭಾಷಣದಲ್ಲಿ ಆಗಮಿಸಿದ ಸೇವೆಯನ್ನು ಸ್ಮರಿಸಿ ಸ್ವಾಗತಿಸಿದರು

ಹಿರಿಯ ವಕೀಲ ನೂರುದ್ದೀನ್ ಸಾಲ್ಮರ ಪುತ್ತೂರು ಪ್ರಸ್ತಾವಿಕವಾಗಿ ಮಾತನಾಡಿ, ಸಂಘಟನೆಯ ಚುನಾವಣಾ ಪ್ರಕ್ರಿಯೆ ಹಾಗೂ ಜಿಲ್ಲೆಯ ಮುಸ್ಲಿಂ ವಕೀಲರು ಸಮುದಾಯದ ಕಷ್ಟದ ಸಂದರ್ಭದಲ್ಲಿ ನೀಡಿದ ಸೇವೆಗಳನ್ನು ವಿವರವಾಗಿ ಹಂಚಿಕೊಂಡರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಮುಜಫರ್ ಅಹ್ಮದ್, ಸಮುದಾಯದ ಕಾನೂನು ಜಾಗೃತಿ ಮತ್ತು ವಕೀಲರ ಹಕ್ಕುಗಳ ರಕ್ಷಣೆಗೆ ಫೋರಂ ಸಂಪೂರ್ಣ ಬದ್ಧವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಫೋರಂನ ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷೆ ಶ್ರೀಮತಿ ತರನ್ನುಮ್, ಪ್ರಧಾನ ಕಾರ್ಯದರ್ಶಿ ಮೊಯೀನುಲ್ಲಾ ಅಬ್ಬಾಸಿ, ಕೋಶಾಧಿಕಾರಿ ವಾಸೀಮ್ ಅಹ್ಮದ್ ಹಾಗೂ ಜೊತೆ ಕಾರ್ಯದರ್ಶಿ ಸಿರಾಜುದ್ದೀನ್ ಅಹಮದ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಪ್ರಧಾನ ಕಾರ್ಯದರ್ಶಿ ಮೋಹಿನುಲ್ಲಾ ಅಬ್ಬಾಸಿ ಮಾತನಾಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ವಕೀಲರು ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಛೇರ್ಮನ್ B.A. ಮುಹಮ್ಮದ್ ಹನೀಫ್, ಮಾಜಿ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ B.A. ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಮಾಜಿ ಮೇಯರ್ ಅಶ್ರಫ್ ಹಾಗೂ ರಫೀಕ್ ಮಾಸ್ಟರ್ ಸೇರಿದಂತೆ ಹಲವು ಗಣ್ಯರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ, ಹಿದಾಯ ಫೌಂಡೇಶನ್ ಹಾಗೂ ಬಿ ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದಲೂ ಮುಝಫ್ಫರ್ ಅಹಮದ್ ಮತ್ತು ಇತರ ಪದಾಧಿಕಾರಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಪ್ರಮುಖರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ, ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲ್, ರಾಜಕೀಯ ಮುಖಂಡರಾದ ಶಾನವಾಝ್ ಕುಳೂರು, ಮಂಗಳೂರು ಬಿ ಹ್ಯೂಮನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಇಮ್ರಾನ್ ಬಂದರ್, ಉಳ್ಳಾಲ ನಗರ ಪಾಲಿಕೆ ಮಾಜಿ ಸದಸ್ಯ U.H. ಫಾರೂಕ್ ಉಳ್ಳಾಲ, ವಕ್ಫ್ ಬೋರ್ಡ್ ಮಾಜಿ ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಜಮಾಲುದ್ದೀನ್, ಸುಳ್ಯ ಸೈದುದ್ದೀನ್ ಬೈಕಂಪಾಡಿ (ಸಂಚಾಲಕರು,ಓಸಿಯನ್ ಸ್ಕೂಲ್ ಜೆಪ್ಪಿನಮೊಗೇರು), ಜಮಿಯ್ಯತುಲ್ ಫಲಾಹ್ ಮುಖಂಡರಾದ ಅಬ್ಬಾಸ್ ಉಚ್ಚಿಲ್, ಕಾರುಣ್ಯ ಕೋ-ಆಪರೇಟಿವ್ ಸೊಸೈಟಿ CEO ಕಾಸಿಂ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಹಮೀದ್ ಕಣ್ಣೂರ್, ಉದ್ಯಮಿ ಕಬೀರ್ ಲಕ್ಕಿಸ್ಟಾರ್, ಬಿ-ಹ್ಯೂಮನ್ ಟ್ರಸ್ಟಿಗಳಾದ ಹಾಫೀಜ್ ಕಣ್ಣಂಗಾರ್, ಶಾಹುಲ್ ಹಮೀದ್ ಉಜಿರೆ, ಸಾಮಾಜಿಕ ಕಾರ್ಯಕರ್ತರಾದ ಉಮ್ಮರ್ ಕುಂಞಿ ಸಾಲೆತ್ತೂರ್, ಹನೀಫ್ ತೋಡಾರ್ ಸೇರಿದಂತೆ ಜಿಲ್ಲೆಯ ಹಲವು ಹಿರಿಯ-ಕಿರಿಯ ವಕೀಲರು, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಕೀಲರಾದ ಅಬ್ದುಲ್ ಅಝೀಜ್ ಅಧ್ಯಕ್ಷೀಯ ಭಾಷಣ ಮಾಡಿದರು,ವಕೀಲರಾದ ಜೀಷನ್ ಅಲಿ ಕಾರ್ಯಕ್ರಮ ನಿರೂಪಿಸಿದರೆ, ವಕೀಲರಾದ ಸರ್ಫ್ರಾಜ್ ಧನ್ಯವಾದ ಸಮರ್ಪಿಸಿದರು.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.