ಯುವ ವಕೀಲ ಪುಟ್ಟಬೈರೇಗೌಡ ಮೇಲಿನ ಹಲ್ಲೆ ಖಂಡನೀಯ, ವಕೀಲರ ಪರ ಮುಂಚೂಣಿಯಲ್ಲಿ ನಿಂತ KSBC ಸದಸ್ಯರಾದ ನಾರಾಯಣಸ್ವಾಮಿ ಜಿ
ಬೆಂಗಳೂರು:ಜನರಿಗೆ ನ್ಯಾಯ ಒದಗಿಸುವ ವಕೀಲರ ಮೇಲೆಯೇ ದೌರ್ಜನ್ಯ ನಡೆದಿರುವುದು ಅತ್ಯಂತ ಖಂಡನೀಯ. ಯುವ ವಕೀಲ ಪುಟ್ಟಬೈರೇಗೌಡ ಅವರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಹಾಗೂ ಪ್ರಕರಣದ ಉಳಿದ ನಾಲ್ವರು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ವಕೀಲರ ನಿಯೋಗವು ಹುಳಿಮಾವು ಪೊಲೀಸ್ ಠಾಣೆಗೆ ಭೇಟಿ ನೀಡಿ ಕಟ್ಟುನಿಟ್ಟಿನ ಮನವಿ ಸಲ್ಲಿಸಿತು.

ಠಾಣೆಯಲ್ಲಿ ಆಗ್ನೇಯ ವಿಭಾಗದ ಡಿಸಿಪಿ ನಾರಾಯಣ್, ಎಸಿಪಿ ಸತೀಶ್ ಹಾಗೂ ಠಾಣಾಧಿಕಾರಿಗಳು ವಕೀಲರ ನಿಯೋಗದೊಂದಿಗೆ ಸುಮಾರು ೩ ಗಂಟೆಗೂ ಹೆಚ್ಚು ಕಾಲ ದೀರ್ಘ ಸಮಾಲೋಚನೆ ನಡೆಸಿದರು. ತಪ್ಪಿಸಿಕೊಂಡಿರುವ ಉಳಿದ ನಾಲ್ವರು ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
KSBC ಸದಸ್ಯರಾದ ನಾರಾಯಣಸ್ವಾಮಿರವರು ಯಾವುದೇ ವಕೀಲರಿಗೆ ಸಮಸ್ಯೆ ಬಂದೊದಗಿದಾಗ ಮುಂಚೂಣಿಯಲ್ಲಿ ನಿಂತು ಧ್ವನಿಯಾಗುವ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯರಾದ ನಾರಾಯಣಸ್ವಾಮಿ ಅವರು ಈ ಬಾರಿಯೂ ವಕೀಲರ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಠಾಣೆಯಲ್ಲಿದ್ದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಾರಾಯಣಸ್ವಾಮಿ ಅವರು, ಬಳಿಕ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಯುವ ವಕೀಲ ಪುಟ್ಟಬೈರೇಗೌಡ ಅವರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

ಶಾಸಕರು ಹಾಗೂ ಮುಖ್ಯಮಂತ್ರಿಗಳ ನಿಕಟವರ್ತಿಗಳಾದ ಎ.ಎಸ್. ಪೊನ್ನಣ್ಣ ಅವರು ವಕೀಲರ ಪರವಾಗಿ ಬೆಂಬಲವಾಗಿ ನಿಂತು, ಘಟನೆ ಕುರಿತು ಮಾನ್ಯ ಮುಖ್ಯಮಂತ್ರಿಗಳಿಂದಲೇ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿಸಿ ಸೂಕ್ತ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಡಿಸಿಪಿ ನಾರಾಯಣ್ ಅವರು ಸಹ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ KSBC ಸದಸ್ಯರಾದ ಸಿ.ಎಂ. ಧನಂಜಯ ಸೇರಿದಂತೆ ಹಲವು ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದು ಹೋರಾಟಕ್ಕೆ ಸಾಥ್ ನೀಡಿದರು.
ವಕೀಲರ ಸಂಘದ ಸಕ್ರಿಯ ಪಾತ್ರಕ್ಕೆ ಕರೆ:
ವೃತ್ತಿಪರ ವಕೀಲರಿಗೆ ಸಮಾಜದಲ್ಲಿ ಸೂಕ್ತ ಗೌರವ ಸಿಗಬೇಕು. ಬಹಿರಂಗವಾಗಿ ವಕೀಲರ ಮೇಲೆ ಹಲ್ಲೆ ನಡೆಸುವುದು ಮತ್ತು ಅಪಮಾನಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ದಿನನಿತ್ಯ ಕರ್ತವ್ಯ ನಿರ್ವಹಿಸುವ ವಕೀಲರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದ್ದು, ಇಂತಹ ಸಂದರ್ಭಗಳಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ಕೃತ್ಯದ ಹಿಂದಿರುವ ಆರೋಪಿಗಳಿಗೆ ನ್ಯಾಯಾಲಯ ಮತ್ತು ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲು ವಕೀಲರ ಸಂಘವು ಪ್ರಮುಖ ಪಾತ್ರ ವಹಿಸಬೇಕಿದೆ.
ವಕೀಲರ ಮೇಲಿನ ಈ ಹಲ್ಲೆಯನ್ನು ತೀವ್ರವಾಗಿ ಖಂಡಿಸಲಾಗಿದ್ದು, ಸಂತ್ರಸ್ತ ಯುವ ವಕೀಲನಿಗೆ ಶೀಘ್ರವೇ ಸಂಪೂರ್ಣ ನ್ಯಾಯ ಸಿಗಬೇಕೆಂದು ವಕೀಲರ ಸಮುದಾಯ ಆಗ್ರಹಿಸಿದೆ.
