Ur Kannada News

ಎಸ್‌ಕೆಎಸ್‌ಎಸ್‌ಎಫ್ ಬೋಳಿಯಾರ್ ಯೂನಿಟ್ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಅಶ್ರಫ್ ದೇವರಗುಂಡಿ ಆಯ್ಕೆ

ಬೋಳಿಯಾರ್: ಎಸ್‌ಕೆಎಸ್‌ಎಸ್‌ಎಫ್ ಬೋಳಿಯಾರ್ ಯೂನಿಟ್‌ನ 2026/28ನೇ ಸಾಲಿನ ನೂತನ ಸಮಿತಿ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸೆಪ್ಟೆಂಬರ್ 13, ರವಿವಾರದಂದು ಯಶಸ್ವಿಯಾಗಿ ನೆರವೇರಿತು.

ರಾತ್ರಿ 7:45ಕ್ಕೆ ಸರಿಯಾಗಿ ಆರಂಭಗೊಂಡ ಕಾರ್ಯಕ್ರಮದಲ್ಲಿ ರಫೀಕ್ ಅಸ್ಲಮೀ ಉಸ್ತಾದ್ ಅವರು ದುಆ ನೆರವೇರಿಸಿ, ಸಮಾವೇಶವನ್ನು ಉದ್ಘಾಟಿಸಿದರು. ಬಿಕೆ ರಾಝೀ ಬೋಳಿಯಾರ್ ಅವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಚುನಾವಣಾ ಅಧಿಕಾರಿಗಳಾಗಿ ಟಿ.ಐ. ಅಬ್ದುಲ್ ಬಷೀರ್ ಕೋಟೆಕಣಿ ಹಾಗೂ ಅಶ್ರಫ್ ಆಲಾಡಿ ಅವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಹಿಂದೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊಹಮ್ಮದ್ ಅವರು ತಮ್ಮ ಅವಧಿಯಲ್ಲಿ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಘಟನಾತ್ಮಕವಾಗಿ ಸಕ್ರಿಯ ಕೊಡುಗೆ ನೀಡಿ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಇದೀಗ ಸಂಘಟನಾ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಅಶ್ರಫ್ ದೇವರಗುಂಡಿ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ನೂತನ ಪದಾಧಿಕಾರಿಗಳ ವಿವರ:

ಅಧ್ಯಕ್ಷರು: ಅಶ್ರಫ್ ದೇವರಗುಂಡಿ

ಪ್ರಧಾನ ಕಾರ್ಯದರ್ಶಿ: ರಫೀಕ್ ಅಸ್ಲಮೀ ಉಸ್ತಾದ್

ವರ್ಕಿಂಗ್ ಕಾರ್ಯದರ್ಶಿ: ಟಿ.ಎ. ಮೊಹಮ್ಮದ್

ಕೋಶಾಧಿಕಾರಿ: ಆಸಿಫ್ ಜಬ್ಬಾರ್ (ಜಬ್ಬು)

ಉಪಾಧ್ಯಕ್ಷರುಗಳು: ಅಬ್ದುಲ್ ರಹಿಮಾನ್, ಮೊಹಮ್ಮದ್ ಅಶ್ರಫ್, ಟಿ.ಪಿ. ಅಝೀಝ್ ಜಬ್ಬಾರ್

ಜೊತೆ ಕಾರ್ಯದರ್ಶಿಗಳು: ಸಿದ್ದೀಕ್ NG, ಹಾರಿಸ್, ಅಹ್ಮದ್ ತಹ್ಸೀನ್ BM

ಸದಸ್ಯರು: ಬಿಕೆ ರಾಝೀ ಬೋಳಿಯಾರ್, ಮಹಮ್ಮದ್ ಮುದಸೀರ್, ಮೊಹಮ್ಮದ್ ಬಾತಿಶ್

ಎಕ್ಸಿಕ್ಯೂಟಿವ್ ಸದಸ್ಯರು: ಹರೀಸ್ ಕಾಫಿ ಕಾಡ್
ಕ್ಲಸ್ಟರ್ ಕೌನ್ಸಿಲರ್‌ಗಳು: ಅಶ್ರಫ್ ದೇವರಗುಂಡಿ, ಸಿ.ಎ. ಅಬ್ದುಲ್ ಖಾದರ್, ಟಿ.ಎ. ಮೊಹಮ್ಮದ್, ಟಿ.ಪಿ. ಅಝೀಝ್ ಜಬ್ಬಾರ್, ಉಬೈದ್ ಕಾಫಿ ಕಾಡ್, ಎನ್.ಎಮ್. ಮೊಹಮ್ಮದ್ ಶಾಫಿ, ಬಿಕೆ ರಾಝೀ ಬೋಳಿಯಾರ್, ಸಿದ್ದೀಕ್ NG, ಮುನೀರ್ ಕಾಫಿ ಕಾಡ್

ಕಾರ್ಯಕ್ರಮವು ರಾತ್ರಿ 9:00 ಗಂಟೆಗೆ ಅಧ್ಯಕ್ಷರ ಅನುಮತಿಯೊಂದಿಗೆ ಮುಕ್ತಾಯಗೊಂಡಿತು. ಸಮಾವೇಶದಲ್ಲಿ ಭಾಗವಹಿಸಿದ ಎಲ್ಲ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *