Ur Kannada News

ವೈವಾಹಿಕ ಜೀವನಕ್ಕೆ ಕಾಲಿಟ್ಟ ಖಲೀಲ್ ಹೊಸಮನೆ: SKSSF ಬೋಳಿಯಾರ್ ಯೂನಿಟ್‌ನಿಂದ ಗೌರವ ಸನ್ಮಾನ

ಬೋಳಿಯಾರ್:SKSSF ಬೋಳಿಯಾರ್ ಯೂನಿಟ್‌ನ ಸಕ್ರಿಯ ಕಾರ್ಯಕರ್ತ, ಸಾಮಾಜಿಕ ಕಳಕಳಿಯುಳ್ಳ ಬರಹಗಾರ ಖಲೀಲ್ ಹೊಸಮನೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ಶುಭ ಸಂದರ್ಭದಲ್ಲಿ SKSSF ಬೋಳಿಯಾರ್ ಘಟಕದ ವತಿಯಿಂದ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಖಲೀಲ್ ಹೊಸಮನೆ ಅವರ ವಿವಾಹ ಕಾರ್ಯಕ್ರಮವು ಸೆಪ್ಟೆಂಬರ್ 13, 2026 ರಂದು ಹೆಚ್. ಕಲ್ಲು ಸಮೀಪದ SK ಹಾಲ್‌ನಲ್ಲಿ ಅದ್ದೂರಿಯಾಗಿ ನೆರವೇರಿತು. ನವದಂಪತಿಗಳಿಗೆ ಶುಭ ಹಾರೈಸಿದ SKSSF ಬೋಳಿಯಾರ್ ಯೂನಿಟ್‌ನ ಪದಾಧಿಕಾರಿಗಳು ಹಾಗೂ ಹಿರಿಯರು, ಸಾಮಾಜಿಕ ಕ್ಷೇತ್ರದಲ್ಲಿ ಅವರ ಸಕ್ರಿಯ ತೊಡಗುವಿಕೆಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ SKSSF ಬೋಳಿಯಾರ್ ಯೂನಿಟ್ ಅಧ್ಯಕ್ಷ ಮೊಹಮ್ಮದ್, ಬೋಳಿಯಾರ್ ಜಮಾಅತ್ ಕಾರ್ಯದರ್ಶಿ CA ಅಬ್ದುಲ್ ಖಾದರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ಬೋಳಿಯಾರ್ ಜಮಾಅತ್ ಕಾರ್ಯದರ್ಶಿ MS ಯೂಸುಫ್,ಅಶ್ರಫ್ ಮೋನು ಬೋಳಿಯಾರ್, ಆರೀಫ್ ಕಾಪಿಕಾಡ್,ಹಾರಿಸ್ ಕಾಪಿಕಾಡ್ , BK ರಾಝಿಕ್ ಬೋಳಿಯಾರ್, ಅದ್ರಾಮ ಅರ್ಕಾಣ, ಮುಸ್ತಫಾ ಮದಕ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *