ಸತತ 3 ದಿನಗಳ ಕಾಲ ಇರುವುದಿಲ್ಲ ಕೋರ್ಟ್ ಕಲಾಪ: ಅಕ್ಟೋಬರ್ 24 ಹಾಗೂ 26 ರಂದು ನ್ಯಾಯಾಲಯಗಳಿಗೆ ರಜೆ ಘೋಷಣೆ
ದಿನಾಂಕ 24/10/2026 (ಶನಿವಾರ) ಮತ್ತು 26/10/2026 (ಸೋಮವಾರ) ರಂದು ನ್ಯಾಯಾಲಯಗಳಿಗೆ ರಜೆ ಇರಲಿದೆ.
ದಿನಾಂಕ 24/10/2026 ಶನಿವಾರದಂದು (4ನೇ ಶನಿವಾರ) ಹಾಗೂ 26/10/2026 ಸೋಮವಾರದಂದು (ಮಹರ್ಷಿ ವಾಲ್ಮೀಕಿ ಜಯಂತಿ ಸರ್ಕಾರಿ ರಜೆ) ನ್ಯಾಯಾಲಯದ ಕಲಾಪಗಳು ನಡೆಯುವುದಿಲ್ಲ.
ಅಲ್ಲದೆ, ಮಧ್ಯದಲ್ಲಿಬರುವ ಅಕ್ಟೋಬರ್ 25 (ಭಾನುವಾರ) ವಾರದ ರಜೆಯಾಗಿರುವುದರಿಂದ ಸತತ ದಿನಗಳಲ್ಲಿ ಕೋರ್ಟ್ ಕಾರ್ಯಕಲಾಪಗಳು ಇರುವುದಿಲ್ಲ.
ಈ ದಿನಗಳಲ್ಲಿ ನಿಗದಿಯಾಗಿದ್ದ ಪ್ರಮುಖ ವಿಚಾರಣೆಗಳು ಮತ್ತು ಕಲಾಪಗಳ ದಿನಾಂಕಗಳನ್ನು ಮುಂದಿನ ಕೆಲಸದ ದಿನಗಳಿಗೆ ಮುಂದೂಡಲಾಗುತ್ತದೆ. ಸಾರ್ವಜನಿಕರು ಹಾಗೂ ಕಕ್ಷಿದಾರರು ಈ ರಜೆಯ ಮಾಹಿತಿಯನ್ನು ಗಮನಿಸಬೇಕಾಗಿ ವಿನಂತಿಸಲಾಗಿದೆ.


