ಬೋಳಿಯಾರ್‌ನಲ್ಲಿ ಮಿಲಾದ್ ಫೆಸ್ಟ್ ಹಾಗೂ 3 ದಿನಗಳ ಕಾರ್ಯಕ್ರಮ: ಆಗಸ್ಟ್ 25ಕ್ಕೆ ಮಿಲಾದ್ ಜಾಥಾ
ಬೋಳಿಯಾರ್: ಮುಹಿಯ್ಯುದ್ದೀನ್ ಜುಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಮದರಸ ಬೋಳಿಯಾರ್ ಇವುಗಳ ಜಂಟಿ ಆಶ್ರಯದಲ್ಲಿ ‘ಹಲವತುಲ್ ಹುಬ್ಬಿ ಮಿಲಾದ್ ಫೆಸ್ಟ್’ ಮತ್ತು ಮೀಲಾದುನ್ನಬಿ ಪ್ರಯುಕ್ತ 3 ದಿನಗಳ ವಿಶೇಷ ಕಾರ್ಯಕ್ರಮಗಳು ಆಗಸ್ಟ್ 22 ರಿಂದ 24 ರವರೆಗೆ ನಡೆಯಲಿವೆ.
ಸಂಭ್ರಮದ ಭಾಗವಾಗಿ ಆಗಸ್ಟ್ 25ರ ಮಂಗಳವಾರ ಬೆಳಿಗ್ಗೆ 8:00 ಗಂಟೆಗೆ ವೈಭವದ ಮಿಲಾದ್ ಜಾಥಾ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸಯ್ಯದ್ ಅಕ್ರಂ ಅಲೀ ತಂಜಳ್ ರಹ್ಮಾನಿ (ಖತೀಬರು, MJM ಬೋಳಿಯಾರ್) ದುವಾ ನೆರವೇರಿಸಲಿದ್ದು, MJM ಬೋಳಿಯಾರ್ ಅಧ್ಯಕ್ಷರಾದ ಪಿ. ಕೆ. ಅಬ್ದುಲ್ಲ (ಶರೀಫ್ ಕಾಫಿಕಾಡ್) ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯದರ್ಶಿ ಜಿ. ಅಬ್ದುಲ್ ಶಕೂರ್ ಸ್ವಾಗತಿಸಲಿದ್ದು, NIM ಬೋಳಿಯಾರ್ ಸದರ್ ಉಸ್ತಾದ್ ಬಹು|| ಶರೀಫ್ ಮದನಿ ಉದ್ಘಾಟನೆ ನೆರವೇರಿಸಲಿದ್ದಾರೆ. ತದನಂತರ ಅಸಯ್ಯದ್ ಅಕ್ರಂ ಅಲೀ ತಂಜಳ್ ರಹ್ಮಾನಿ ಅವರಿಂದ ಮುಖ್ಯ ಮತ ಪ್ರಭಾಷಣ ನಡೆಯಲಿದೆ.
ವೇದಿಕೆಯಲ್ಲಿ ಕೆ. ಕೆ. ಅಬೂಬಕ್ಕರ್ (ಕೋಶಾಧಿಕಾರಿ), ಅಬ್ದುಲ್ ಖಾದರ್ C.A (ಪ್ರಧಾನ ಕಾರ್ಯದರ್ಶಿ), ಮಹಮ್ಮದ್ ಇಕ್ಬಾಲ್ (ಉಪಾಧ್ಯಕ್ಷರು), ಆರಿಫ್ ಕಾಫಿಕಾಡ್ (ಕಾರ್ಯದರ್ಶಿ), B.M. ಮಹಮ್ಮದ್ ಹನೀಫ್ (ಸದಸ್ಯರು), B.K. ಅಬ್ದುಲ್ ಜಬ್ಬಾರ್ (ಸದಸ್ಯರು), ಅಬ್ದುಲ್ ಅಝೀಝ್ (ಸದಸ್ಯರು), ರವೂಫ್ (ಸದಸ್ಯರು) ಹಾಗೂ ಅಬೂಬಕ್ಕರ್ ಪೋಡಿಯ (ಸದಸ್ಯರು) ಉಪಸ್ಥಿತರಿರಲಿದ್ದಾರೆ.
ಅಲ್ಲದೆ, ಗಣ್ಯ ಉಪಸ್ಥಿತರಾಗಿ ಸಾಜಿದ್ ಯಮಾನಿ, ರವೂಫ್ ಇರ್ಫಾನಿ, ಬಾತಿಶ್ ಫೈಝಿ, ಮುಸ್ಲಿಹ್ ಯಮಾನಿ ಹಾಗೂ ಸ್ವಾಧಿಕ್ ಹನೀಫಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿವರಗಳಂತೆ ಶನಿವಾರ ಹಾಗೂ ಭಾನುವಾರ ಅಸರ್ ನಮಾಜ್ ಬಳಿಕ ಮದರಸ ಮಕ್ಕಳ ಕಾರ್ಯಕ್ರಮಗಳು ನಡೆಯಲಿವೆ. ಸೋಮವಾರ ಅಸ್ತಮಸೀದ ಹಾಗೂ ಮಂಗಳವಾರ ಮಗ್ರಿಬ್ ನಮಾಜ್ ಬಳಿಕ ಸಭಾ ಕಾರ್ಯಕ್ರಮ, ಮತ ಪ್ರಭಾಷಣ, ಮೌಲಿದ್ ಪಾರಾಯಣ ಹಾಗೂ ಅನ್ನದಾನ ಜರುಗಲಿದೆ. ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶದ ವ್ಯವಸ್ಥೆ ಮಾಡಲಾಗಿದ್ದು, ಜಮಾಅತ್ತಿನ ಸದಸ್ಯರು ಹಾಗೂ ದೀನಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಆಡಳಿತ ಸಮಿತಿ, ಮುಹಿಯ್ಯುದ್ದೀನ್ ಜುಮಾ ಮಸೀದಿ ಬೋಳಿಯಾರ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

