ಸಿವಿಲ್ ಜಡ್ಜ್ ಆಕಾಂಕ್ಷಿಗಳಿಗೆ ನಾಳೆ ಬಿಗ್ ಡೇ: 3 ವರ್ಷಗಳ ಅನುಭವದ ನಿಯಮದ ವಿರುದ್ಧ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳ ತೀರ್ಪು ಪ್ರಕಟ
ಹೊಸದೆಹಲಿ:ಸಿವಿಲ್ ಜಡ್ಜ್ ಸೇರಿದಂತೆ ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ಹಾಜರಾಗಲು ಕನಿಷ್ಠ 3 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿರಬೇಕು ಎಂಬ ನಿಯಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ನಾಳೆ ತನ್ನ ಪ್ರಮುಖ ತೀರ್ಪನ್ನು ಪ್ರಕಟಿಸಲಿದೆ.
ನ್ಯಾಯಾಂಗ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಕನಿಷ್ಠ 3 ವರ್ಷಗಳ ಕಾಲ ವಕೀಲಿಕೆ ಅನುಭವ ಕಡ್ಡಾಯಗೊಳಿಸಿದ ನಿಯಮವು ಹೊಸದಾಗಿ ಕಾನೂನು ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಕಷ್ಟಕರವಾಗಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ನಿಯಮವನ್ನು ಮರುಪರಿಶೀಲಿಸುವಂತೆ ಕೋರಿ ಕಾನೂನು ವಿದ್ಯಾರ್ಥಿಗಳು ಹಾಗೂ ವಕೀಲರ ಸಂಘಟನೆಗಳು ಉನ್ನತ ನ್ಯಾಯಾಲಯದ ಬಾಗಿಲು ತಟ್ಟಿದ್ದವು.
ನಾಳೆ ಬರಲಿರುವ ಸುಪ್ರೀಂ ಕೋರ್ಟ್ನ ಈ ತೀರ್ಪು, ದೇಶಾದ್ಯಂತ ಲಕ್ಷಾಂತರ ಕಾನೂನು ಪದವೀಧರರು ಮತ್ತು ನ್ಯಾಯಾಂಗ ಸೇವಾ ಆಕಾಂಕ್ಷಿಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದೆ.

