Ur Kannada News

ಕಣ್ಣೀರು ಒರೆಸುವ ಕರುಣೆಯ ಕಡಲು, ಬಡವರ ಬದುಕಿಗೆ ಆಸರೆಯ ನೆರಳು: ಡಾ| ಹೆಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ

ಸಮಾಜ ಸೇವೆ ಎಂಬುದು ಬರಿ ಮಾತಲ್ಲ, ಅದೊಂದು ನಿರಂತರ ಕಾಯಕ ಎಂಬುದನ್ನು ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ನಿರೂಪಿಸಿರುವ ಡಾ| ಹೆಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಅವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಚಿರಪರಿಚಿತರಾಗಿದ್ದಾರೆ. ಕಷ್ಟದಲ್ಲಿದ್ದವರ ಕಣ್ಣೀರೊರೆಸುವ ಮೂಲಕ, ಬಡವರ ಬಂಧುವಾಗಿ ಹಾಗೂ ಕರಾವಳಿಯ ಸಾಮರಸ್ಯದ ಸಂಕೇತವಾಗಿ ಮೂಡಿಬಂದಿರುವ ಇವರ ನಿಸ್ವಾರ್ಥ ಸೇವೆಗೆ ಗೌರವವಾಗಿ ನವೆಂಬರ್ 2025 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಶಸ್ತಿ ಲಭಿಸಿರುವುದು ಅತ್ಯಂತ ಸಂತಸದ ವಿಷಯ.

ಹಲವಾರು ವರ್ಷಗಳಿಂದ ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ಸಕ್ರಿಯರಾಗಿರುವ ಇವರು ‘ಬಂಧುತ್ವ ಚಾರಿಟೇಬಲ್ ಟ್ರಸ್ಟ್’ ಸ್ಥಾಪಿಸಿ ಸಮಾಜದ ಕೊನೆಯ ಹಂತದ ವ್ಯಕ್ತಿಗೂ ನೆರವಿನ ಹಸ್ತ ಚಾಚುತ್ತಿದ್ದಾರೆ. ತಮ್ಮ ಆಫೀಸ್‌ನಲ್ಲಿ ದೇಶ-ನಾಡಿನ ಹಲವು ಮಹಾನೀಯರ ಫೋಟೋಗಳನ್ನು ಇಟ್ಟು ಗೌರವಿಸುವ ಇವರು, ಅತ್ಯಂತ ಅರ್ಹ ಹಾಗೂ ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಟ್ಟು ಬದುಕಿಗೆ ಆಸರೆಯಾಗಿದ್ದಾರೆ.

ಕೊರೋನಾ ಮಹಾಮಾರಿಯಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಸಹಪಾಠಿಗಳನ್ನು ಒಗ್ಗೂಡಿಸಿ, ಮನೆ ಮನೆಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ತಲುಪಿಸುವ ಮೂಲಕ ಜನರ ಹೃದಯದಲ್ಲಿ ಸ್ಥಿರ ಸ್ಥಾನ ಪಡೆದಿದ್ದಾರೆ.

ಇವರ ಕೊಡುಗೆ ಕೇವಲ ಸಾಮಾಜಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗಿರದೆ, ಉತ್ತಮ ಮಾತುಗಾರಿಕೆ ಹಾಗೂ ಬರಹಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಇವರು, ಭ್ರಷ್ಟಾಚಾರ ವಿರೋಧಿ ವೇದಿಕೆಗಳು ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜನರನ್ನು ಅಪಾರವಾಗಿ ಪ್ರೀತಿಸುವ ವಿಶಾಲ ಮನಸ್ಸು ಹೊಂದಿರುವ ಇವರು, ನನ್ನಿಂದ ಸಮಾಜಕ್ಕೆ ಯಾವುದಾದರೂ ರೀತಿಯಲ್ಲಿ ಒಳ್ಳೆಯದಾಗಬೇಕು ಎಂಬ ಸದಾ ತುದಿತವನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಶುದ್ಧ ಹಸ್ತದ ನಾಯಕರಾಗಿದ್ದಾರೆ.

ಯಾವುದೇ ರಾಜಕೀಯ ಅಧಿಕಾರವಿಲ್ಲದಿದ್ದರೂ ತಮ್ಮ ಗಳಿಕೆಯ ಬಹುಭಾಗವನ್ನು ಸಮಾಜಕ್ಕೆ ಧಾರೆಯೆರೆದು ಸೇವೆಯಲ್ಲಿ ನಿರತರಾಗಿರುವ ಇಂತಹ ನಾಯಕರು ಚುನಾವಣೆಯಲ್ಲಿ ಜಯಗಳಿಸಿ, ಇವರಿಂದ ಸಮಾಜಕ್ಕೆ ಹಾಗೂ ಜನರಿಗೆ ಇನ್ನಷ್ಟು ಅಭಿವೃದ್ಧಿಪರ ಕೆಲಸಗಳು ಮೂಡಿಬರುವಂತಾಗಲಿ ಎಂಬುವುದು ನಮ್ಮೆಲ್ಲರ ಅಪೇಕ್ಷೆಯಾಗಿದೆ.

ಗೌರವ ಡಾಕ್ಟರೇಟ್ ಪುರಸ್ಕೃತರಾದ ಇಸ್ಮಾಯಿಲ್ ಶಾಫಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸೃಷ್ಟಿಕರ್ತ ಆಯುರಾರೋಗ್ಯ ಮತ್ತು ಸುಖ-ಸಂಪತ್ತು ನೀಡಿ ಅನುಗ್ರಹಿಸಲಿ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.