Ur Kannada News

ಯು.ಟಿ. ಖಾದರ್ ಅವರ ಕ್ರಿಯಾಶೀಲತೆಯ ಹಿಂದಿನ ಬೆನ್ನೆಲುಬು:ಲಿಬ್ ಝತ್

ಲಿಬ್ ಝತ್ ಎಂಬ ಚುರುಕಿನ ಪಿ.ಎ.
ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿ ರಾಜ್ಯದಲ್ಲೇ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಅವರ ಯಶಸ್ಸಿನ ಹಿಂದೆ ಒಬ್ಬ ಲವಲವಿಕೆಯ ಯುವಕನ ಪಾತ್ರವಿದೆ. ಅದು ಬೇರ್ಯಾರೂ ಅಲ್ಲ. ಆ ಹೆಸರು ಲಿಬ್ ಝತ್—ಆರೋಗ್ಯ ಸಚಿವರ ಆಪ್ತ ಸಹಾಯಕ. ಲಿಬ್ ಝತ್ ಬೇರ್ಯಾರೂ ಅಲ್ಲ, ಯು.ಟಿ.ಖಾದರ್ ಅವರ ತಾಯಿಯ ಸಹೋದರಿಯ ಮಗ;

ಲಿಬ್ ಝತ್ ಕೈಯಲ್ಲಿ ನಾಲ್ಕು ಮೊಬೈಲ್ ಗಳಿವೆ. ಈ ನಾಲ್ಕೂ ಮೊಬೈಲ್ ಗಳು ಸದಾಕಾಲ ರಿಂಗಣಿಸುತ್ತದೆ, ಅದಕ್ಕೆ ಹಗಲು-ರಾತ್ರಿ ಎಂಬ ವ್ಯತ್ಯಾಸವಿಲ್ಲ. ಸಚಿವರ ಜೊತೆಗೆ ಲಿಬ್ ಝತ್ ಇದ್ದರೆ ಒಂದು ಫೋನ್ ಡಿಸ್ಕನೆಕ್ಟ್ ಆದಾಗ ಮತ್ತೊಂದು ಸಚಿವರ ಕಿವಿಗೆ ಹೋಗಲು ರೆಡಿಯಾಗಿರುತ್ತದೆ. ನಿರಂತರವಾಗಿ ನಾಲ್ಕು ಫೋನ್ ಕೂಡಾ ಆನ್‌ಲೈನ್ ನಲ್ಲಿರುತ್ತದೆ, ಅದಕ್ಕೆ ಬಿಡುವು ಎಂಬುದಿಲ್ಲ. ಹೀಗೇ ನಿರಂತರ ಬಿಡುವಿಲ್ಲದೆ ಲಿಬ್ ಝತ್ ಫೋನಿನೊಳಗೇ ಸುತ್ತುತ್ತಿರುತ್ತಾರೆ. ದಿನನಿತ್ಯ ಕಡಿಮೆಯೆಂದರೂ 400-500 ಫೋನ್ ಕಾಲ್ ಗಳನ್ನು ಎಟೆಂಡ್ ಮಾಡ್ತಾರೆ.

ಇನ್ನು ನೀವು ಲಿಬ್ ಝತ್ ಗೆ ಕಾಲ್ ಮಾಡುವಾಗ ಬಿಝಿ ಬಂದ್ರೆ ಮತ್ತೆ ಮತ್ತೆ ಪ್ರಯತ್ನಿಸುವ ಅಗತ್ಯವಿಲ್ಲ. ನಿಮ್ಮ ಮಿಸ್ ಕಾಲ್ ನೋಡಿ ಲಿಬ್ ಝತ್ ನಿಮಗೇ ಪುನಃ ಕರೆ ಮಾಡ್ತಾರೆ. ಅದು ಪರಿಚಯದ ಫೋನೇ ಆಗಬೇಕೆಂದಿಲ್ಲ, ಅಪರಿಚಿತ ನಂಬ್ರವಾದರೂ ಸರಿ. ಲಿಬ್ ಝತ್ ಗೆ ಫೋನ್ ಮಾಡಿದರೆ ನಯ ವಿನಯದಿಂದ ಮಾತಾಡ್ತಾರೆ, ತಾಳ್ಮೆಯಿಂದ ನಮ್ಮ ವಿಷಯವನ್ನು ಆಲಿಸ್ತಾರೆ.

ಕಳೆದ ಹಲವಾರು ವರ್ಷಗಳಿಂದ ಸಚಿವರ ಜೊತೆಗೆ ಆಪ್ತ ಸಹಾಯಕರಾಗಿರುವ ಲಿಬ್ ಝತ್, ಇಂತಿಷ್ಟು ಸಮಯಕ್ಕೆ ಇಂತಹ ಕಡೆ ಇರಬೇಕೆಂದರೆ ಕಾರು ಚಲಾಯಿಸಿ ತಲುಪಿಸುವುದರಲ್ಲೂ ಸಿದ್ಧಹಸ್ತರು. ಲಿಬ್ ಝತ್ ಮೊಬೈಲ್ ಗಳಲ್ಲಿ ಇಲ್ಲದ ನಂಬರ್ ಗಳಿಲ್ಲ. ಸಚಿವರು ಯಾರ ನಂಬರ್ ಕೇಳಿದ್ರೂ ಲಿಬ್ ಝತ್ ತಕ್ಷಣ ಡಯಲ್ ಮಾಡಿ ಕೊಡ್ತಾರೆ. ಸಚಿವರ ಜೊತೆಗೆ ಹಗಲು ರಾತ್ರಿ ನಿದ್ದಗೆಟ್ಟು ದುಡಿಯುವ ಲಿಬ್ ಝತ್ ಅವರಿಗೆ ಹ್ಯಾಟ್ಸಾಫ್.

ಯು.ಟಿ. ಖಾದರ್ ಅವರು ಹಲವು ಖಾತೆಗಳ ಸಚಿವರಾಗಿ, ಶಾಸಕರಾಗಿ ಮತ್ತು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಜನರ ಮನ ಗೆಲ್ಲುವಲ್ಲಿ ಹಾಗೂ ತಮ್ಮ ಕ್ರಿಯಾಶೀಲತೆಯನ್ನು ಮೆರೆಯುವಲ್ಲಿ ಲಿಬ್ ಝತ್ ಅವರ ಪಾತ್ರ ಮತ್ತು ಶ್ರಮ ಅತ್ಯಂತ ದೊಡ್ಡದಾಗಿದೆ.

ಅಧಿಕಾರ ಇಂದು ಇರಬಹುದು, ನಾಳೆ ಹೋಗಬಹುದು; ಆದರೆ ಅಧಿಕಾರ ಮೀರಿದ ಈ ನಿಸ್ವಾರ್ಥ ಸೇವೆ ಮತ್ತು ವ್ಯಕ್ತಿತ್ವವನ್ನು ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *