Ur Kannada News

ಬಂಟ್ವಾಳ ವಕೀಲರ ಸಂಘದಲ್ಲಿ ಹಿರಿಯ ವಕೀಲ ಚಂದ್ರಶೇಖರ ಪುಂಚಮೆ ಜನ್ಮದಿನಾಚರಣೆ

ಬಂಟ್ವಾಳ: ಬಂಟ್ವಾಳ ವಕೀಲರ ಸಂಘದ ಹಿರಿಯ ವಕೀಲರಾದ ಚಂದ್ರಶೇಖರ ಪುಂಚಮೆ ಅವರ ಜನ್ಮದಿನದ ಪ್ರಯುಕ್ತ ವಕೀಲರ ಸಂಘದ ಸಭಾಂಗಣದಲ್ಲಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಲಾಯಿತು.

62 ವರ್ಷ ವಯಸ್ಸಾದರೂ ಇಂದಿಗೂ ಯುವಕರಂತೆ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಂಡಿರುವ, ಹಲವು ಸಂಘ-ಸಂಸ್ಥೆಗಳ ಸಕ್ರಿಯ ಮುಖಂಡರಾಗಿ, ಉತ್ತಮ ನಿರೂಪಕರಾಗಿ,ಯಾವುದೇ ಕಾರ್ಯಕ್ರಮದಲ್ಲೂ ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸುವ ಹಿರಿಯ ವಕೀಲ ಚಂದ್ರಶೇಖರ ಪುಂಚಮೆ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿ ಮಾತನಾಡಿದ ಹಿರಿಯ ವಕೀಲ ಶಿವಾನಂದ ಪೈ ಅವರು, ಚಂದ್ರಶೇಖರ ಪುಂಚಮೆ ಅವರ ವೃತ್ತಿಪರತೆ ಹಾಗೂ ಎಲ್ಲರೊಂದಿಗೆ ಬೆರೆಯುವ ಆತ್ಮೀಯ ಗುಣ ನಿಜಕ್ಕೂ ಶ್ಲಾಘನೀಯ. ಯಾವುದೇ ಕೆಲಸವಿರಲಿ ಅದನ್ನು ನಿಷ್ಠೆಯಿಂದ ಮಾಡುವ ವ್ಯಕ್ತಿತ್ವ ಅವರದ್ದು ಎಂದು ಹೇಳಿದರು.

ವಕೀಲ ಕಬೀರ್ ಕೆಮ್ಮಾರ ಅವರು ಮಾತನಾಡಿ 62 ವರ್ಷ ಪ್ರಾಯದಲ್ಲೂ ಚಂದ್ರಶೇಖರ ಪುಂಚಮೆ ಅವರ ಉತ್ಸಾಹ ಮತ್ತು ಕ್ರಿಯಾಶೀಲತೆ ಅಪಾರವಾದದ್ದು, ವಕೀಲರ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲೂ ಅವರು ತೋರಿಸುವ ಕ್ರಿಯಾಶೀಲತೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸುರೇಶ್ ಪೂಜಾರಿ, ಹಿರಿಯ ವಕೀಲರುಗಳಾದ ಹಾತಿಮ್ , ಗಣೇಶ್ ಪೈ, ರಾಜೇಶ್ ಬೊಳ್ಳುಕಲ್ಲು, ಮೋಹನ್ ಕಡೆಶಿವಾಲ್ಯ, ಜಲೀಲ್ ನಂದಾವರ , ಗಝಾಲಿ, ಮಂಜುನಾಥ್, ಅಫ್ರೀಝ್ ಸಜಿಪ, ಮಾಧುರಿ, ಶುಭ, ರೆಹಾನಾ ಸೇರಿದಂತೆ ಹಲವು ವಕೀಲ ವೃಂದದವರು ಹಾಗೂ ಸ್ನೇಹಿತರು ಉಪಸ್ಥಿತರಿದ್ದು ಶುಭ ಹಾರೈಸಿದರು.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *