Latest:
Ur Kannada News

ಸಹ-ಆರೋಪಿಗಳ ಹೇಳಿಕೆ ಆಧಾರಿಸಿ ಕೇಸ್ ದಾಖಲಿಸುವಂತಿಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ,ಎನ್‌ಡಿಪಿಎಸ್ ಪ್ರಕರಣದಿಂದ ಇಬ್ಬರು ಖುಲಾಸೆ

ಮಂಗಳೂರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎನ್‌ಡಿಪಿಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 6ನೇ ಆರೋಪಿ ಧ್ರುವ್ ಡಿ. ಶೆಟ್ಟಿ ಅಲಿಯಾಸ್ ಧ್ರುವನ್ ಶೆಟ್ಟಿ ಮತ್ತು 7ನೇ ಆರೋಪಿ ಪ್ರಜ್ವಲ್ ಫಿನೇಹಾಸ್ ವಿರುದ್ಧದ ಕ್ರಿಮಿನಲ್ ನಡಾವಳಿಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಮೊಹಮ್ಮದ್ ನವಾಝ್ ಅವರು ಅರ್ಜಿದಾರರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿ, ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣದ ಪ್ರಕ್ರಿಯೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.

2025ರ ಜುಲೈ 2 ರಂದು ಮಂಗಳೂರು ಸಿಇಎನ್ ಪೊಲೀಸರು ನಡೆಸಿದ ದಾಳಿಯಲ್ಲಿ 5.759 ಕೆಜಿ ಗಾಂಜಾ, ₹5.20 ಲಕ್ಷ ನಗದು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡು ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ವಶಪಡಿಸಿಕೊಂಡ ಗಾಂಜಾವನ್ನು ಅರ್ಜಿದಾರರೇ ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನೂ ಪ್ರಕರಣದಲ್ಲಿ ಸೇರಿಸಲಾಗಿತ್ತು. ಆದರೆ ಅರ್ಜಿದಾರರನ್ನು ಘಟನಾ ಸ್ಥಳದಲ್ಲಿ ಬಂಧಿಸಿಲ್ಲ, ಅವರಿಂದ ಯಾವುದೇ ಗಾಂಜಾ ವಶಪಡಿಸಿಕೊಂಡಿಲ್ಲ ಹಾಗೂ ಕೇವಲ ಸಹ-ಆರೋಪಿಗಳು ನೀಡಿದ ಸ್ವಯಂಪ್ರೇರಿತ ಹೇಳಿಕೆ ಹೊರತುಪಡಿಸಿ ಅವರ ವಿರುದ್ಧ ಬೇರೆ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕೇವಲ ಸಹ-ಆರೋಪಿಗಳ ಹೇಳಿಕೆ ಅಥವಾ ಇತರ ಪ್ರಕರಣಗಳಿವೆ ಎಂಬ ಆಧಾರದ ಮೇಲೆ ವಿಚಾರಣೆ ಮುಂದುವರಿಸುವುದು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಇಬ್ಬರೂ ಆರೋಪಿಗಳ ಮೇಲಿನ ಸಂಪೂರ್ಣ ನಡಾವಳಿಗಳನ್ನು ವಜಾಗೊಳಿಸಿದೆ.

ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಕೀಲರಾದ ಶ್ರೀ ಅರ್ಷದ್ ಎಂ.ಪಿ. ಮತ್ತು ಮಹಮ್ಮದ್ ಇರ್ಫಾನ್ ವಾದ ಮಂಡಿಸಿದ್ದರು.

 ಸಹ-ಆರೋಪಿಯ ಹೇಳಿಕೆ ಸಾಕ್ಷಿಯಾಗಲ್ಲ ಎಂದ ವಕೀಲರ ವಾದ ಮಾನ್ಯ (Crl.P No. 1526/2026): ಹೈಕೋರ್ಟ್‌ನಿಂದ ತೀರ್ಪು  

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *