Ur Kannada News

ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವ ಸಂಘಟಕ ಆಬಿದ್ ಬಂಗುಳೆ: SKSSF ಬೋಳಿಯಾರ್ ವತಿಯಿಂದ ಶುಭ ಹಾರೈಕೆ

ಬೋಳಿಯಾರ್:
ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಾಮಾಜಿಕ ಕಳಕಳಿ ಹೊಂದಿರುವ ಯುವ ಸಂಘಟಕ ಹಾಗೂ SKSSF ಬೋಳಿಯಾರ್ ಘಟಕ ಇದರ ಸಕ್ರಿಯ ಸದಸ್ಯರಾದ ಆಬಿದ್ ಬಂಗುಳೆ ಅವರು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಬಿದ್ ರವರ ವಿವಾಹ ಕಾರ್ಯಕ್ರಮವು KMS ಹಾಲ್‌ನಲ್ಲಿ ನೆರವೇರಿತು, ಈ ಸಂದರ್ಭದಲ್ಲಿ SKSSF ಬೋಳಿಯಾರ್ ಘಟಕದ ವತಿಯಿಂದ ಆಬಿದ್ ಬೋಳಿಯಾರ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿ, ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಬೋಳಿಯಾರ್ ಜುಮಾ ಮಸೀದಿಯ ಖತೀಬರಾದ ಸಯ್ಯದ್ ಅಕ್ರಮ್ ಅಲಿ ತಂಞಳ್, SKSSF ಬೋಳಿಯಾರ್ ಯೂನಿಟ್ ಅಧ್ಯಕ್ಷರಾದ ಮೊಹಮ್ಮದ್, ಬೋಳಿಯಾರ್ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿಯಾದ ಸಿ.ಎ. ಅಬ್ದುಲ್ ಖಾದರ್, ಅಸ್ಲಮಿ ಉಸ್ತಾದ್, ಹಿರಿಯರಾದ ಪಿ.ಕೆ. ಹಾಜರ್, skssf ಬೋಳಿಯಾರ್ ಯುನಿಟ್ ಸದಸ್ಯರಾದ ಆಸಿಫ್ ಜಬ್ಬು ಸೇರಿದಂತೆ ಅನೇಕ ಪ್ರಮುಖರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದು ಶುಭವನ್ನು ಹಾರೈಸಿದರು.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *