ಬೋಳಿಯಾರಿನಲ್ಲಿ ಯುವ ನಾಯಕನಾಗಿ ಮಿಂಚುತ್ತಿರುವ ಆರಿಫ್ ಬೋಳಿಯಾರ್
ನಮ್ಮ ಬೋಳಿಯಾರ್ ಗ್ರಾಮದ ಆರಿಫ್ ಬೋಳಿಯಾರ್ ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಜನಪರ ಕಾಳಜಿಯ ಪಯಣವು ಮಾದರಿಯಾಗಿದೆ. ಒಬ್ಬ ಉಪನ್ಯಾಸಕರಾಗಿ, ವಿಭಾಗೀಯ ಮುಖ್ಯಸ್ಥರಾಗಿ ಹಾಗೂ ಪ್ರಿನ್ಸಿಪಾಲರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಇವರು, ಸಮಾಜದ ಪ್ರತಿಯೊಂದು ವರ್ಗದ ಕಷ್ಟಗಳಿಗೆ ಸ್ಪಂದಿಸುವ ಜನನಾಯಕರಾಗಿ ಹೊರಹೊಮ್ಮಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಆರಿಫ್ ಅವರು, ಹತ್ತಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಹಾಗೂ ಹಲವು ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಧ್ವನಿ ಎತ್ತಿದ್ದಾರೆ.
ನಾವು ಮಾಡುವ ಪ್ರತಿಯೊಂದು ಒಳ್ಳೆಯ ಕೆಲಸವೂ ಒಂದು ಪುಣ್ಯದ ಕಾರ್ಯ ಎಂಬ ತತ್ವದಂತೆ, ರಕ್ತದ ತುರ್ತು ಅಗತ್ಯವಿರಲಿ, ಆಸ್ಪತ್ರೆಯ ಸಮಸ್ಯೆಗಳಿರಲಿ ಅಥವಾ ಯಾವುದೇ ತುರ್ತು ಪರಿಸ್ಥಿತಿ ಎದುರಾಗಲಿ, ತಕ್ಷಣವೇ ನೆರವಿಗೆ ಧಾವಿಸಿ ಸ್ಪಂದಿಸಿದ್ದಾರೆ. ಅವರು ಮಾಡಿದ ಈ ಸೇವೆಯನ್ನು ಇಂದು ಕೂಡ ಜನರು ನೆನಪಿಸಿಕೊಳ್ಳುತ್ತಾರೆ.
ಇತ್ತೀಚೆಗೆ ನಡೆದ ಎಸ್ಐಆರ್ ಪ್ರಕ್ರಿಯೆಯ ಕಾರ್ಯದಲ್ಲಿ ರಾತ್ರಿ-ಹಗಲೆನ್ನದೆ ನಿರಂತರವಾಗಿ ತೊಡಗಿಸಿಕೊಂಡು ಶ್ರಮಿಸಿದ ನಾಯಕ ಆರಿಫ್ ಬೋಳಿಯಾರ್ ಆಗಿದ್ದಾರೆ , ಗ್ರಾಮದ ಪ್ರತಿಯೊಬ್ಬ ನಾಗರಿಕರಿಗೂ ಈ ಪ್ರಕ್ರಿಯೆಯಿಂದ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ.
ಹೀಗೆ ಶಿಕ್ಷಣ, ಸಮಾಜ ಸೇವೆ ಮತ್ತು ಯುವ ನಾಯಕತ್ವದ ಆರಿಫ್ ಬೋಳಿಯಾರ್ ಅವರಿಗೆ ಶುಭವಾಗಲಿ, ಅವರ ಸಮಾಜ ಸೇವೆಯ ಹಾದಿ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮ ಆಶಯ.


