ಯುವ ನಾಯಕನಾಗಿ ಮಿಂಚುತ್ತಿರುವ ಇಬ್ರಾಹಿಂ ನವಾಝ್: ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಂಘಟನೆಗೆ ಹೊಸ ಚೈತನ್ಯ
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ಇಬ್ರಾಹಿಂ ನವಾಝ್ ಅವರು ಕರಾವಳಿ ಭಾಗದಲ್ಲಿ ಅತ್ಯಂತ ಪ್ರಭಾವಿ ಯುವ ನಾಯಕನಾಗಿ ಮಿಂಚುತ್ತಿದ್ದಾರೆ.
ತನ್ನ ವಿದ್ಯಾರ್ಥಿ ಜೀವನದಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬೇರೂರಿದ ಇವರು, ಅನೇಕ ಹೋರಾಟಗಳು ಹಾಗೂ ಪ್ರತಿಭಟನೆಗಳ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ಸದಾ ಧೈರ್ಯ ತುಂಬಿ ಉತ್ತೇಜನ ನೀಡಿದವರು.
ಆರಂಭದಲ್ಲಿ ಪಾಣೆಮಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಆ ಸ್ಥಾನಕ್ಕೆ ಸೂಕ್ತ ನ್ಯಾಯ ಹಾಗೂ ಅಪಾರ ಪ್ರಸಿದ್ಧಿ ತಂದುಕೊಟ್ಟ ಇವರು, ಪ್ರಸ್ತುತ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳಿಗೆ ಹೊಸ ವೇಗ ನೀಡಿದ್ದಾರೆ.
ತನ್ನ ಸಮರ್ಥ ನೇತೃತ್ವದಲ್ಲಿ ಅನೇಕ ಜನಪರ ಕಾರ್ಯಕ್ರಮಗಳಿಗೆ ಅಡಿಪಾಯ ಇಟ್ಟಿರುವ ಇವರು, ಜಿಲ್ಲಾ ಮಟ್ಟದ ನಾಯಕರಷ್ಟೇ ಅಲ್ಲದೆ ರಾಜ್ಯ ಮಟ್ಟದ ಹಿರಿಯ ನಾಯಕರೊಂದಿಗೂ ಅತ್ಯುತ್ತಮ ಬಾಂಧವ್ಯ ಮತ್ತು ಒಡನಾಟವನ್ನು ಕಾಯ್ದುಕೊಂಡಿದ್ದಾರೆ. ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸುವ, ಎಲ್ಲರನ್ನೂ ಜೊತೆಗೂಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಇವರ ನಾಯಕತ್ವದ ಗುಣ ಸಂಘಟನೆಗೆ ಮತ್ತು ಸುದೀರ್ಘ ಹೋರಾಟದ ಹಾದಿ, ಸಮಗ್ರ ಅಭಿವೃದ್ಧಿಯ ಚಿಂತನೆಯ ಗುಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಖಂಡಿತವಾಗಿಯೂ ಹೆಚ್ಚಿನ ಬಲ ತಂದುಕೊಡಲಿವೆ ಎಂಬುದು ಕಾರ್ಯಕರ್ತರ ಹಾಗೂ ಬೆಂಬಲಿಗರ ಆಶಯವಾಗಿದೆ.
ಇವರ ನಿರಂತರ ಸಂಘಟನಾ ಚಾಕಚಕ್ಯತೆಗಳು ಮುಂಬರುವ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಖಂಡಿತವಾಗಿಯೂ ಆನೆಬಲ ತಂದುಕೊಡಲಿವೆ. ಯುವ ನಾಯಕನಾಗಿ ಮಿಂಚುತ್ತಿರುವ ಇಬ್ರಾಹಿಂ ನವಾಝ್ ಅವರಿಗೆ ಆ ಭಗವಂತನು ಮತ್ತಷ್ಟು ಶಕ್ತಿ, ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜಕೀಯ ರಂಗದಲ್ಲಿ ಉನ್ನತ ಯಶಸ್ಸನ್ನು ನೀಡಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇವೆ.


