SDTU ರಾಜ್ಯ ಸಮಿತಿ ಸದಸ್ಯ, ಮಂಗಳೂರು ನಗರ ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್‌ಗೆ ಸನ್ಮಾನ
ಬಜಪೆ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರು ಹಾಗೂ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಅವರನ್ನು SDTU ಬಜಪೆ ಬ್ಲಾಕ್ ಸಮಿತಿ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರಹಿಮಾನ್ ಬೋಳಿಯಾರ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ನಾಯಕರಾಗಿದ್ದು, ಯಾವುದೇ ಉತ್ತಮ ಕೆಲಸಗಳಿದ್ದರೂ ಹೆಚ್ಚಿನ ರೀತಿಯಲ್ಲಿ ಬೆಂಬಲ ನೀಡುವ ಸಜ್ಜನ ರಾಜಕಾರಣಿಯಾಗಿದ್ದಾರೆ.
ಉತ್ತಮ ಭಾಷಣಕಾರ ಹಾಗೂ ಅತ್ಯುತ್ತಮ ಬರಹಗಾರರೂ ಆಗಿರುವ ಇವರು, ತಮಗೆ ನೀಡಿದ ಯಾವುದೇ ಉಸ್ತುವಾರಿ ಮತ್ತು ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿ ಸಂಘಟನೆಗೆ ಹೆಚ್ಚಿನ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ. ಇವರ ಅಪಾರ ಸಾಮಾಜಿಕ ಕಳಕಳಿ, ವಿಶೇಷವಾಗಿ ಕಾರ್ಮಿಕರ ಮತ್ತು ಶ್ರಮಿಕ ವರ್ಗದ ಹಕ್ಕುಗಳಿಗಾಗಿ ಸದಾ ಮುಂಚೂಣಿಯಲ್ಲಿದ್ದು ಅವರ ಹಕ್ಕಿನ ಧ್ವನಿಯಾಗಿ ಹೋರಾಡುವ ನಾಯಕತ್ವ ಗುಣವನ್ನು ಬ್ಲಾಕ್ ಸಮಿತಿಯ ಪ್ರಮುಖರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಈ ಗೌರವಾರ್ಪಣೆ ಕಾರ್ಯಕ್ರಮದಲ್ಲಿ SDTU ಬಜಪೆ ಬ್ಲಾಕ್ ಸಮಿತಿಯ ಪದಾಧಿಕಾರಿಗಳು, ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


