Ur Kannada News

ಸೌಹಾರ್ದ ಸಮಾಜದ ಧ್ವನಿ ಹರೀಶ್ ಪೂಜಾರಿ ಮುಡಿಗೆ ಮತ್ತೊಂದು ಗರಿ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ವಕೀಲರಾಗಿ ನೋಂದಾವಣೆ

ಸಾಮಾಜಿಕ ಕಳಕಳಿ ಹಾಗೂ ನಾಡಿನ ಸೌಹಾರ್ದತೆಗೆ ಅಪಾರ ಕೊಡುಗೆ ನೀಡುತ್ತಾ ಜನಮನ ಗೆದ್ದಿರುವ ನಮ್ಮೆಲ್ಲರ ಪ್ರೀತಿಯ ಹರೀಶ್ ಪೂಜಾರಿ ಅವರು ತಮ್ಮ ಎಲ್‌ಎಲ್‌ಬಿ ಕಾನೂನು ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಇದೀಗ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಅಧಿಕೃತವಾಗಿ ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೆ.

ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಮಾಜದಲ್ಲಿ ಸೌಹಾರ್ದತೆ, ಭಾವೈಕ್ಯತೆ ಹಾಗೂ ಸಹೋದರತೆಯನ್ನು ಎತ್ತಿಹಿಡಿಯುವಲ್ಲಿ ಮುಂಚೂಣಿಯಲ್ಲಿದ್ದ ಹರೀಶ್ ಪೂಜಾರಿ ಅವರು, ಸದಾ ಕಷ್ಟದಲ್ಲಿದ್ದವರ ನೆರವಿಗೆ ಧಾವಿಸುವ ಹಾಗೂ ಸಮಾಜದ ಹಿತಕ್ಕಾಗಿ ಸ್ಪಂದಿಸುವ ಉದಾರ ಮನೋಭಾವದವರು. ಸಮಾಜದ ಬಡ-ಬಲಹೀನರಿಗೆ ನ್ಯಾಯ ಕೊಡಿಸುವ ಮಹತ್ವಾಕಾಂಕ್ಷೆಯಿಂದ ಇವರು ಕಾನೂನು ಕ್ಷೇತ್ರಕ್ಕೆ ಧುಮುಕಿದ್ದಾರೆ.

ನ್ಯಾಯದ ಪರವಾಗಿ ಧ್ವನಿಯಾಗಲಿರುವ ಅವರ ವಕೀಲ ವೃತ್ತಿಯ ನೂತನ ಪಯಣವು ಅತ್ಯಂತ ಯಶಸ್ವಿಯಾಗಲಿ ಹಾಗೂ ಸಮಾಜಕ್ಕೆ ಅವರಿಂದ ಇನ್ನಷ್ಟು ಸೇವೆ ಲಭಿಸಲಿ ಎಂದು ಗೆಳೆಯರ ಬಳಗ ಹಾಗೂ ಬಂಧು-ಮಿತ್ರರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.