ಯುವ ನಾಯಕ ಸಂಶುದ್ದೀನ್ ಕರೈ ಈಗ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವಕೀಲ
ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ, ನಂತರ ಬೆಂಗಳೂರಿನ ಅಲ್-ಅಮೀನ್ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಶಿಕ್ಷಣ ಮುಗಿಸಿದ ಸಂಶುದ್ದೀನ್ ಕರೈ ಅವರು ಇದೀಗ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಅಧಿಕೃತವಾಗಿ ವಕೀಲರಾಗಿ ನೋಂದಾಯಿಸಿಕೊಂಡಿದ್ದಾರೆ.
ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಕ್ರಿಯ ಯೂತ್ ಲೀಡರ್ ಆಗಿ ಗುರುತಿಸಿಕೊಂಡಿದ್ದ ಸಂಶುದ್ದೀನ್ ಅವರು ಭಾಷಣ ಕಲೆ, ಲೇಖನ ಬರಹ ಹಾಗೂ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ಸಮಾಜದಲ್ಲಿ ಯಾರೇ ಕಷ್ಟದಲ್ಲಿದ್ದರೂ ತಕ್ಷಣ ಸಹಾಯಕ್ಕೆ ಓಡೋಡಿ ಬರುವ ಅತ್ಯಂತ ಉತ್ಸಾಹಿ ಮತ್ತು ಸಮಾಜಮುಖಿ ಯುವ ನಾಯಕರಾಗಿರುವ ಇವರು, ಇದೀಗ ಕಾನೂನು ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವುದು ಅವರ ಗ್ರಾಮಸ್ಥರಿಗೆ ಹಾಗೂ ಒಡನಾಡಿಗಳಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅವರ ಮುಂಬರುವ ವಕೀಲ ವೃತ್ತಿಯ ಪಯಣ ಅತ್ಯಂತ ಯಶಸ್ವಿಯಾಗಲಿ ಎಂದು ‘ಡಿಗ್ರಿ ರಾಕರ್ಸ್’ ಬಳಗ ಹಾಗೂ ಬಂಧು-ಮಿತ್ರರು ಶುಭ ಹಾರೈಸಿದ್ದಾರೆ.

