Ur Kannada News

ಯುವನಾಯಕನಾಗಿ ಮಿಂಚುತ್ತಿರುವ ಅಶ್ರಫ್ ಮೋನು ಬೋಳಿಯಾರ್: ಮಾದರಿ ನಾಯಕತ್ವಕ್ಕೊಂದು ಅಪರೂಪದ ನಿದರ್ಶನ

ಸಮಾಜಮುಖಿ ಚಿಂತನೆ, ಸರಳತೆ ಮತ್ತು ಜನಸೇವೆಯಿಂದಲೇ ತಮ್ಮದೇ ಆದ ಛಾಪು ಮೂಡಿಸಿರುವ ಅಶ್ರಫ್ ಮೋನು ಬೋಳಿಯಾರ್ ಅವರು ಕೇವಲ ನಾಯಕತ್ವದ ಸ್ಥಾನದಲ್ಲಿ ನಿಲ್ಲದೆ, ಸದಾ ಜನರ ಕಷ್ಟಸುಖಗಳಿಗೆ ಮಿಡಿಯುವ ಸೇವಕನಾಗಿ ಗುರುತಿಸಿಕೊಂಡಿದ್ದಾರೆ.

ವೇದಿಕೆಯ ಉತ್ತಮ ಭಾಷಣಗಾರ ಮಾತ್ರವಲ್ಲದೆ ಎದುರಿಗಿರುವವರ ಅಳಲನ್ನು ತಾಳ್ಮೆಯಿಂದ ಆಲಿಸುವ ಅತ್ಯುತ್ತಮ ಕೇಳುಗನಾಗಿರುವ ಇವರು,ಯಾವುದೇ ಸಮಸ್ಯೆ ಎದುರಾದಾಗ ಸಾರ್ವಜನಿಕರು ಇವರ ಬಳಿ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಿದ್ದು, ಯಾರ ಮನಸ್ಸನ್ನೂ ನೋಯಿಸದ ಸಜ್ಜನ ರಾಜಕಾರಣಿಯಾಗಿ ಎಲ್ಲರಿಗೂ ಆಪ್ತ ಗೆಳೆಯರಾಗಿದ್ದಾರೆ.


ಪಕ್ಷಭೇದ ಮರೆತು ಯುವಕರನ್ನು ಸಂಘಟಿಸುವ ಶಕ್ತಿ ಹೊಂದಿರುವ ಇವರು, ಅತ್ಯುತ್ತಮ ವಿದ್ವತ್ತು, ಮಾತುಗಾರಿಕೆ ಹಾಗೂ ಬರಹದ ಮೂಲಕ ಎಲ್ಲ ಧರ್ಮದ ಜನರೊಂದಿಗೆ ಸೌಹಾರ್ದಯುತ ಬಾಂಧವ್ಯವನ್ನು ಕಾಯ್ದುಕೊಂಡು ಬಂದಿರುವ ನಿಜವಾದ ‘ಕಮ್ಯೂನಿಟಿ ಹೀರೋ’.

ಇವರ ಮಾರ್ಗದರ್ಶನ ಸ್ವಂತ ಕುಟುಂಬದಲ್ಲೂ ಪ್ರತಿಫಲಿಸಿದ್ದು, ತಮ್ಮ ಸಹೋದರರಲ್ಲಿ ಒಬ್ಬರನ್ನು ಯಶಸ್ವಿ ಉದ್ಯಮಿಯನ್ನಾಗಿ, ಮತ್ತೊಬ್ಬರನ್ನು ಸಹಾಯಕ ಪ್ರಾಧ್ಯಾಪಕರನ್ನಾಗಿ ಹಾಗೂ ಕಿರಿಯ ಸಹೋದರನನ್ನು ವಕೀಲರನ್ನಾಗಿ ರೂಪಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಇಂತಹ ಸರಳ ಹಾಗೂ ದೂರದೃಷ್ಟಿಯ ವ್ಯಕ್ತಿತ್ವ ಹೊಂದಿರುವ ಅಶ್ರಫ್ ಮೋನು ಬೋಳಿಯಾರ್ ಅವರು ಬೋಳಿಯಾರ್ ಗ್ರಾಮದ ನಾಯಕತ್ವವನ್ನು ವಹಿಸಿಕೊಂಡರೆ ಬೋಳಿಯಾರ್ ಗ್ರಾಮವನ್ನು ಒಂದು ಅತ್ಯಂತ ಮಾದರಿ ಗ್ರಾಮವನ್ನಾಗಿ ಪರಿವರ್ತಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.