ಬೋಳಿಯಾರ್: ಬಿಂದಾಸ್ ಸಂಘಟನೆಯಿಂದ ಈದ್ ಮೀಲಾದ್ ಆಚರಣೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ
ಸಾಮೂಹಿಕ ಮದುವೆ, ಉಚಿತ ಆಂಬ್ಯುಲೆನ್ಸ್ ಸೇವೆ ಹಾಗೂ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಬೋಳಿಯಾರ್ ಪ್ರದೇಶದಲ್ಲಿ ಅತ್ಯಂತ ಸಕ್ರಿಯವಾಗಿ ಗುರುತಿಸಿಕೊಂಡಿರುವ ಬಿಂದಾಸ್ ಸಂಘಟನೆಯ ವತಿಯಿಂದ ಈದ್ ಮೀಲಾದ್ ಆಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಯ್ಯದ್ ಅಕ್ರಂ ಅಲೀ ತಂಙಳ್ ರಹ್ಮಾನಿ ಅವರು ಧ್ವಜಾರೋಹಣ ನೆರವೇರಿಸಿದರು. ತದನಂತರ MJM ಬೋಳಿಯಾರ್ ಖತೀಬರು ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದ ಅಶ್ರಫ್ ಮೋನು ಅವರು, ಪ್ರವಾದಿ ಮುಹಮ್ಮದ್ (ಸ.ಅ) ಅವರ ಸರ್ವಧರ್ಮ ಸಮಭಾವ, ಸೌಹಾರ್ದತೆ ಮತ್ತು ಸೋದರತ್ವದ ಕುರಿತಾದ ಅಮೂಲ್ಯ ಸಂದೇಶಗಳನ್ನು ಹಂಚಿಕೊಂಡರು.


ಈ ಸಮಾರಂಭದಲ್ಲಿ MJM ಅಧ್ಯಕ್ಷರಾದ ಜ| ಪಿ. ಕೆ. ಅಬ್ದುಲ್ಲ, MJM ಕಾರ್ಯದರ್ಶಿ ಜ| ಅಬ್ದುಲ್ ಶಕೂರ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಬಿ. ಕೆ. ಅಬ್ದುಲ್ ಜಬ್ಬಾರ್, SKSSF ಅಧ್ಯಕ್ಷರಾದ ಮೊಹಮ್ಮದ್, ಬಿಂದಾಸ್ ಸಂಘಟನೆಯ ಪ್ರಮುಖರಾದ ಬದ್ರು,ಅಬೂಬಕ್ಕರ್, ಸಲೀಂ ಮತ್ತು ಶರೀಫ್, ಹಾಗೂ ಟಿ. ಪಿ. ಜಬ್ಬಾರ್, ಬಷೀರ್ ಕಾಪಿಕಾಡ್ ಮತ್ತು ವಕೀಲರಾದ ಅಶ್ಫಾಕ್ ಬೋಳಿಯಾರ್ ಸೇರಿದಂತೆ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


