ತಲಪಾಡಿ ಡೈಮಂಡ್ ಶಾಲೆಯಲ್ಲಿ ಅಕ್ಟೋಬರ್ 3ಕ್ಕೆ ‘ಬ್ಯಾರಿ ಭಾಷಾ ದಿನಾಚರಣೆ’
ಬಂಟ್ವಾಳ: ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಆಶ್ರಯದಲ್ಲಿ ‘ಬ್ಯಾರಿ ಭಾಷಾ ದಿನಾಚರಣೆ’, ಸಭಾ ಕಾರ್ಯಕ್ರಮ, ಬ್ಯಾರಿ ಕವಿಗೋಷ್ಟಿ ಹಾಗೂ ಬ್ಯಾರಿ ಹಾಡುಗಾರಿಕೆ ಕಾರ್ಯಕ್ರಮವು ಅಕ್ಟೋಬರ್ 3, 2026ರ ಶನಿವಾರ ಪೂರ್ವಾಹ್ನ 10:30ಕ್ಕೆ ಬಿ.ಸಿ. ರೋಡಿನ ತಲಪಾಡಿಯ ಡೈಮಂಡ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಶಾಹುಲ್ ಹಮೀದ್ ವಗ್ಗ ಅವರು ಶುಭ ಹಾರೈಸಿದ್ದಾರೆ.
ಕಾರ್ಯಕ್ರಮವನ್ನು ಡೈಮಂಡ್ ಇಂಟರ್ನ್ಯಾಷನಲ್ ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಜಿ| ಸಲೀಂ ಅಲ್ತಾಫ್ ಉದ್ಘಾಟಿಸಲಿದ್ದು, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳದ ಅಧ್ಯಕ್ಷರಾದ ಜಿ| ಬಿ.ಎಂ. ಅಬ್ಬಾಸ್ ಅಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರಿನ ಪತ್ರಕರ್ತ ಜಿ| ಸಂಶುದ್ದೀನ್ ಸಂಪ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಟಿ.ಕೆ. ಎಂಟರ್‌ಪ್ರೈಸಸ್ ಫರಂಗಿಪೇಟೆಯ ಮಾಲಕರಾದ ಜಿ| ಎಫ್.ಎಂ. ಬಶೀರ್ ಫರಂಗಿಪೇಟೆ, ಹಜಾಜ್ ಸಮೂಹ ಸಂಸ್ಥೆ ಗೋಳಿತಡ್ಕದ ಪಾಲುದಾರರಾದ ಜಿ| ಹಾಜಿ ಜಿ. ಅಹ್ಮದ್ ಮುಸ್ತಾಫಾ ಹಾಗೂ ಇರ್ಕುತ್ತುನೂರು ಯತೀಂ ಖಾನಾದ ಕೋಶಾಧಿಕಾರಿ ಜಿ| ಹಂಝ ಪರ್ಲಿಯ ಭಾಗವಹಿಸಲಿದ್ದಾರೆ.
ಬ್ಯಾರಿ ಕವಿಗೋಷ್ಟಿ ಹಾಗೂ ಹಾಡುಗಾರಿಕೆ:
ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಬ್ಯಾರಿ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳದ ಸಂಚಾಲಕರಾದ ಜಿ| ಪಿ.ಎ. ರಹೀಂ ವಹಿಸಲಿದ್ದು, ಕವಿಗಳಾದ ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ಅಬೂಬಕ್ಕರ್ ಅಮ್ಮುಂಜೆ, ಶಂಶೀರ್ ಬುಡೋಳಿ, ಆಯಿಷಾ ಯು.ಕೆ., ಆಯಿಷಾ ಪರ್ನೆ, ಸತ್ತಾರ್ ಗೂಡಿನಬಳಿ, ಸಲೀಂ ಬೋಳಂಗಡಿ, ಹನೀಫ್ ನಂದರಬೆಟ್ಟು, ಸರ್ಫಾರಾಝ್ ಆಲಾಡಿ ಹಾಗೂ ಸಲೀಂ ಮಾಣಿ ಭಾಗವಹಿಸಲಿದ್ದಾರೆ.
ಅಲ್ಲದೆ, ಅಶ್ರಫ್ ಅಪೋಲೊ ಕಲ್ಲಡ್ಕ, ರಶೀದ್ ನಂದಾವರ ಹಾಗೂ ಶರೀಫ್ ಪರ್ಲಿಯ ಅವರಿಂದ ಬ್ಯಾರಿ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸುವಂತೆ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.


