ಕಾಂಗ್ರೆಸ್ ಲೀಗಲ್ ಸೆಲ್ ಬಂಟ್ವಾಳ ಉಸ್ತುವಾರಿಯಾಗಿ ವಕೀಲರಾದ ಸುದರ್ಶನ್ ಕುಮಾರ್ ಮುಳಿಯ ಆಯ್ಕೆ
ವಕೀಲರಾಗಿ ಅಪಾರ ಜನಪ್ರಿಯತೆ ಗಳಿಸಿರುವ ಹಾಗೂ ಬಿ.ಸಿ.ರೋಡ್‌ನಲ್ಲಿ ತಮ್ಮ ಕಚೇರಿ ಹೊಂದಿ ಸದಾ ಸಾರ್ವಜನಿಕರ ಸೇವೆಗೆ ಸ್ಪಂದಿಸುವ ಶ್ರೀ ಎಂ. ಸುದರ್ಶನ್ ಕುಮಾರ್ ಮುಳಿಯ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಮಿಟಿಯ (ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ (ಬಂಟ್ವಾಳ ಕ್ಷೇತ್ರ ಉಸ್ತುವಾರಿ) ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಕೆ.ಪಿ.ಸಿ.ಸಿ ಕಾನೂನು ಘಟಕದ ರಾಜ್ಯ ಅಧ್ಯಕ್ಷರಾದ ಶ್ರೀ ಸಿ. ಎಂ. ಧನಂಜಯ ಅವರ ಆದೇಶದ ಮೇರೆಗೆ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಬಿ. ಕೆ. ಹರಿಪ್ರಸಾದ್ ಅವರ ಅನುಮೋದನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಶ್ರೀ ಮನೋರಾಜ್ ರಾಜೀವ್ ಅವರು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ.

ತಮ್ಮ ಸರಳ ವ್ಯಕ್ತಿತ್ವ ಹಾಗೂ ಕಾನೂನು ಕ್ಷೇತ್ರದ ಕ್ರಿಯಾಶೀಲ ಸೇವೆಯಿಂದಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಸುದರ್ಶನ್ ಕುಮಾರ್ ಮುಳಿಯ ಅವರಿಗೆ ಕಾಂಗ್ರೆಸ್ ಪಕ್ಷದ ಕಾನೂನು ಘಟಕವನ್ನು ಮತ್ತಷ್ಟು ಸಂಘಟಿಸುವ ಹಾಗೂ ಸಂಘಟನಾತ್ಮಕವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ಮಹತ್ವದ ಜವಾಬ್ದಾರಿ ಈಗ ಅವರ ಮೇಲಿದೆ. ಇವರ ಈ ಹೊಸ ನೇಮಕಾತಿಗೆ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ವಕೀಲ ಸಮುದಾಯ ಹಾಗೂ ಅಪಾರ ಬೆಂಬಲಿಗರು ಹರ್ಷ ವ್ಯಕ್ತಪಡಿಸಿ ಶುಭಾಶಯಗಳನ್ನು ಕೋರಿದ್ದಾರೆ.

