Ur Kannada News

ಬಂಟ್ವಾಳ: ವಕೀಲರಾದ ಮೋಹನ್ ಕಡೆಶಿವಾಲಯ ಜನ್ಮದಿನಾಚರಣೆ – ಕೇಕ್ ಕತ್ತರಿಸಿ ಶುಭಾಶಯ ಕೋರಿದ ವಕೀಲ ವೃಂದ

ಬಂಟ್ವಾಳ ವಕೀಲರ ಸಂಘದ ಸದಸ್ಯರಾದ ಮೋಹನ್ ಕಡೆಶಿವಾಲಯ ಅವರ ಜನ್ಮದಿನದ ಅಂಗವಾಗಿ ಬಂಟ್ವಾಳ ವಕೀಲರ ಸಂಘದಲ್ಲಿ ಕೇಕ್ ಕತ್ತರಿಸುವ ಕಾರ್ಯಕ್ರಮ ಹಾಗೂ ಲಘು ಉಪಹಾರ ಕೂಟವನ್ನು ಗುರುವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎಚ್. ಸತೀಶ್ ರಾವ್, ರಮೇಶ್ ಉಪಾಧ್ಯಾಯ, ಚೆನ್ನಪ್ಪ ಸಾಲ್ಯಾನ್, ಹಾತಿಮ್,, ಶೋಭಾಲತಾ ಸುವರ್ಣ, ಶೀನಪ್ಪ ಪೂಜಾರಿ, ಸದಾಶಿವ ನಾಯಕ್, ಪ್ರಸಾದ್ ಕುಮಾರ್ ರೈ,ರಾಜೇಶ್ ಬೊಳ್ಳುಕಲ್ಲು, ಕಬೀರ್ ಕೆಮ್ಮಾರ, ಜಲೀಲ್ ನಂದಾವರ ,ಅಶ್ರಫ್ ಕುಕ್ಕಾಜೆ ,ಮಂಜುನಾಥ್ ಪೂಜಾರಿ ಸೇರಿದಂತೆ ಹಲವಾರು ಹಿರಿಯ ಹಾಗೂ ಕಿರಿಯ ವಕೀಲರು ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷರು ಮತ್ತು ಹಿರಿಯ ವಕೀಲರಾದ ಸುರೇಶ್ ಪೂಜಾರಿ ಅವರು ಮಾತನಾಡಿ ವಕೀಲರಾದ ಮೋಹನ್ ಅವರ ವ್ಯಕ್ತಿತ್ವ ಹಾಗೂ ವೃತ್ತಿಪರತೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಕೇಕ್ ಕತ್ತರಿಸಿ, ಭಾಗವಹಿಸಿದ ಎಲ್ಲಾ ವಕೀಲ ಮಿತ್ರರಿಗೆ ಹಾಗೂ ಹಿತೈಷಿಗಳಿಗೆ ಲಘು ಉಪಹಾರ ವಿತರಿಸಲಾಯಿತು.

ಕೊನೆಯಲ್ಲಿ ಹಿರಿಯ-ಕಿರಿಯ ವಕೀಲರೆಲ್ಲರೂ ಒಟ್ಟಾಗಿ ಸೇರಿ ಮೋಹನ್ ಕಡೆಶಿವಾಲಯ ಅವರ ಜನ್ಮದಿನದ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರಿಗೆ ಮತ್ತು ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಲಾಯಿತು.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *