ನ್ಯಾಯಾಂಗ ಸೇವೆಯ ಜೊತೆ ಸಾಹಿತ್ಯಿಕ ಆಸಕ್ತಿ: ಶಾಹುಲ್ ಹಮೀದ್ ವಗ್ಗಗೆ ಸನ್ಮಾನದ ಗೌರವ
ನ್ಯಾಯಾಂಗ ಇಲಾಖೆಯಲ್ಲಿ ಸುದೀರ್ಘ ಕಾಲದಿಂದ ಅತ್ಯುತ್ತಮ ಸೇವೆ ಸಲ್ಲಿಸುತ್ತಾ, ತಮ್ಮ ಸೌಜನ್ಯಯುತ ನಡವಳಿಕೆ ಹಾಗೂ ಪ್ರಾಮಾಣಿಕತೆಯಿಂದ ಪ್ರಶಂಸೆ ಗಳಿಸಿರುವ ಶಾಹುಲ್ ಹಮೀದ್ ವಗ್ಗ ಅವರಿಗೆ ‘ಅಖಿಲ ಭಾರತೀಯ ಸಂಘ’ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಗೌರವ ಸನ್ಮಾನ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಗಿದೆ.

ಮೂಲತಃ ಹುಟ್ಟೂರು ಮಂಗಳೂರು ತಾಲೂಕು, ಅಡ್ಡೂರು ಗ್ರಾಮದ ಅಳಕೆ ಮನೆಹೌಸ್ ನಿವಾಸಿಯಾದ ಶಾಹುಲ್ ಹಮೀದ್ ಅವರು ವಗ್ಗ ಅಬ್ದುಲ್ ರಹಿಮಾನ್ ಹಾಗೂ ಬೀಫಾತುಮ್ಮ ದಂಪತಿಯ ಪುತ್ರ. ಈ ಹಿಂದೆ ಪುತ್ತೂರು ನ್ಯಾಯಾಲಯದಲ್ಲಿ ನ್ಯಾಯಾಂಗ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದ ಇವರು, ಪ್ರಸ್ತುತ ಬಂಟ್ವಾಳ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇವಲ ಇಲಾಖಾ ಕರ್ತವ್ಯಕ್ಕಷ್ಟೇ ಸೀಮಿತವಾಗದೆ, ಸಮಾಜಮುಖಿ ಚಿಂತನೆ ಹಾಗೂ ಸಾರ್ವಜನಿಕರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ನಿಸ್ವಾರ್ಥ ಸೇವೆ ಹಾಗೂ ಸಮಾಜಮುಖಿ ಕೊಡುಗೆಗಳನ್ನು ಗುರುತಿಸಿ ಈಗಾಗಲೇ ಹಲವು ಸನ್ಮಾನಗಳು ಲಭಿಸಿವೆ.

ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯತ್ವ:
ಶಾಹುಲ್ ಹಮೀದ್ ವಗ್ಗ ಅವರು ನ್ಯಾಯಾಂಗ ಇಲಾಖೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು ,ಹಲವು ಪ್ರಮುಖ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ:
ಸದಸ್ಯರು, ಸ್ವೌತ್ ಕೆನರಾ ಗವರ್ನ್ ಮೆಂಟ್ ಆಫೀಸರ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮಂಗಳೂರು, ದಕ್ಷಿಣ ಕನ್ನಡ
ಸದಸ್ಯರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘ ನಿಯಮಿತ ಮಂಗಳೂರು
ನ್ಯಾಯಾಂಗ ಇಲಾಖೆ ಸದಸ್ಯರು ಬಂಟ್ವಾಳ
ಸದಸ್ಯರು, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಬಂಟ್ವಾಳ ತಾಲೂಕು ಘಟಕ, ದಕ್ಷಿಣ ಕನ್ನಡ
ಗ್ರಂಥಾಲಯ ಸದಸ್ಯ ಬಂಟ್ವಾಳ ,ಮಂಗಳೂರು,
ಸದಸ್ಯರು, ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ಬೈಲೀಫ್ಸ್ ಮತ್ತು ಪ್ರೋಸೇಸ್ ಸರ್ವರ್ಸ್ ಸೆಂಟ್ರಲ್ ಅಸೋಸಿಯೇಷನ್ (ರಿ), ಬೆಂಗಳೂರು/ಶಿವಮೊಗ್ಗ
ಸದಸ್ಯರು, ಆಲ್ ಇಂಡಿಯಾ ಸಬ್ಆರ್ಡಿನೇಟ್ ಕೋರ್ಟ್ ಸ್ಟಾಫ್ ಅಸೋಸಿಯೇಷನ್
ಸದಸ್ಯರು, ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮಂಗಳೂರು
ಗೌರವ ಸದಸ್ಯರು, ಮುಹಿಯುದ್ದೀನ್ ಜುಮ್ಮಾ ಮಸೀದಿ, ವಗ್ಗ, ಬಂಟ್ವಾಳ ತಾಲೂಕು
ಇನ್ನೊಂದೆಡೆ, ಶಾಹುಲ್ ಹಮೀದ್ ಹಾಗೂ ನಸೀಮಾ ದಂಪತಿಯ ಪುತ್ರಿ ಫಾತಿಮಾ ಫರ್ಹಾ ಅವರು ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇಕಡಾ 91% ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

