Ur Kannada News

SKSSF ಸಜೀಪ ಕ್ಲಸ್ಟರ್ ಮಟ್ಟದಲ್ಲಿ ಬೋಳಿಯಾರ್ ಶಾಖೆಗೆ ದ್ವಿತೀಯ ಸ್ಥಾನ: ಮಾದರಿ ಸಂಘಟನೆಗೆ ಸಾಕ್ಷಿಯಾದ ಮೊಹಮ್ಮದ್ ಸಾರಥ್ಯ

SKSSF ಸಜೀಪ ಕ್ಲಸ್ಟರ್ ವ್ಯಾಪ್ತಿಯ 2024–26ನೇ ಸಾಲಿನ ಕಾರ್ಯಾಚರಣೆಯಲ್ಲಿ ಬೋಳಿಯಾರ್ ಶಾಖೆಯು ಅತ್ಯುತ್ತಮ ಸಾಧನೆಗೈದು ಮಾದರಿ ಶಾಖೆಯಾಗಿ ಹೊರಹೊಮ್ಮಿದೆ. ಕೇಂದ್ರ, ರಾಜ್ಯ, ಜಿಲ್ಲೆ, ವಲಯ ಹಾಗೂ ಕ್ಲಸ್ಟರ್ ಸಮಿತಿಗಳು ನೀಡಿದ ಬಹುತೇಕ ಕಾರ್ಯಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ಬೋಳಿಯಾರ್ ಶಾಖೆಯು ಕ್ಲಸ್ಟರ್ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಈ ಗಮನಾರ್ಹ ಸಾಧನೆಗೆ ಬೋಳಿಯಾರ್ ಶಾಖೆಯ ಅಧ್ಯಕ್ಷರಾದ ಮೊಹಮ್ಮದ್ ಅವರ ಸಮರ್ಥ ನಾಯಕತ್ವ ಮತ್ತು ಸಂಘಟನಾ ಶಕ್ತಿ ಕೂಡ ಒಂದು ಪ್ರಮುಖ ಕಾರಣವಾಗಿದೆ. ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಒಗ್ಗೂಡಿಸಿ ಸಂಘಟನೆಯನ್ನು ಮುನ್ನಡೆಸುತ್ತಿರುವ ಅಧ್ಯಕ್ಷ ಮೊಹಮ್ಮದ್ ಅವರ ಕ್ರಿಯಾಶೀಲತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಅಧ್ಯಕ್ಷ ಮೊಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ಸಮಸ್ತ ಬೋಳಿಯಾರ್‌ನಲ್ಲಿ ಸಂಘಟನೆಯು ಮುಂದೆಯೂ ಸದಸ್ಯರು ಇದೇ ರೀತಿಯ ಸಹಕಾರ ಮತ್ತು ಬೆಂಬಲವನ್ನು ನೀಡಬೇಕಾಗಿ ವಿನಂತಿಸಲಾಗಿದೆ. “ನಮ್ಮ ಸಂಸ್ಥೆಯ ಅಧ್ಯಕ್ಷರು ಎಂದರೆ ನಮ್ಮ ಪ್ರತಿನಿಧಿ. ಅವರು ಇನ್ನಷ್ಟು ದೀನ್ ಸೇವೆಯನ್ನು ಮಾಡಲು ಅಲ್ಲಾಹನು ಅನುಗ್ರಹಿಸಲಿ” ಎಂದು ಬೋಳಿಯಾರ್ ಶಾಖೆಯ ಪ್ರಮುಖರು ಹಾರೈಸಿದ್ದಾರೆ.

ಬೋಳಿಯಾರ್ ಶಾಖೆಯ ಈ ಸಾಧನೆಯನ್ನು ಗುರುತಿಸಿ SKSSF ಸಜೀಪ ಕ್ಲಸ್ಟರ್ ಸಮಿತಿಯು ಶಾಖಾ ಸಮಿತಿಗೆ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದೆ.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *