ಬೋಳಿಯಾರ್: ವಿಜೃಂಭಣೆಯಿಂದ ಜರುಗಿದ ಮೀಲಾದ್ ಜಾಥಾ; ತಂಪು ಪಾನೀಯ ವಿತರಿಸಿ ಸೌಹಾರ್ದತೆ ಮೆರೆದ ಯುವಕರ ತಂಡ
ಬೋಳಿಯಾರ್: ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ನೂರುಲ್ ಇಸ್ಲಾಂ ಮದರಸ ಬೋಳಿಯಾರ್, ಎಸ್.ಕೆ.ಎಸ್.ಎಸ್.ಎಫ್ ಮತ್ತು ಎಸ್.ಕೆ.ಎಸ್.ಬಿ.ವಿ ಬೋಳಿಯಾರ್ ಶಾಖೆಯ ಜಂಟಿ ಆಶ್ರಯದಲ್ಲಿ ಮೀಲಾದುನ್ನಬಿ ಪ್ರಯುಕ್ತ ಹಮ್ಮಿಕೊಳ್ಳಲಾದ ಬೃಹತ್ ಮೀಲಾದ್ ಜಾಥಾ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪ್ರವಾದಿಯವರ ಪ್ರೀತಿ, ಶಾಂತಿ ಹಾಗೂ ಮಾನವೀಯತೆಯ ಸಂದೇಶವನ್ನು ಜನತೆಗೆ ಸಾರುತ್ತಾ ಸಾಗಿದ ಈ ಜಾಥಾವು ಸೌಹಾರ್ದತೆಯ ಬೆಳಕನ್ನು ಚೆಲ್ಲಿತು.

ಈ ಬೃಹತ್ ಸಂಭ್ರಮದ ಜಾಥಾದಲ್ಲಿ ಸಹೋದರ ಧರ್ಮದ ಮನೋಜ್ ಹಾಗೂ ಡ್ಯಾನಿಶ್ ಲಿಲ್ಲಿ ನೇತೃತ್ವದ ಯುವಕರ ತಂಡವು ಭಾಗವಹಿಸಿ, ಜಾಥಾದಲ್ಲಿದ್ದ ಸಾರ್ವಜನಿಕರಿಗೆ ಹಾಗೂ ಕಾರ್ಯಕರ್ತರಿಗೆ ತಂಪು ಪಾನೀಯ ವಿತರಿಸುವ ಮೂಲಕ ಕೋಮು ಸೌಹಾರ್ದತೆ ಮತ್ತು ಭ್ರಾತೃತ್ವದ ಶ್ರೇಷ್ಠ ಸಂದೇಶ ಸಾರಿ ಮಾದರಿಯಾದರು.

ಈ ಜಾಥಾದಲ್ಲಿ ಸಯ್ಯದ್ ಅಕ್ರಂ ಅಲೀ ತಂಙಳ್ ರಹ್ಮಾನಿ, MJM ಬೋಳಿಯಾರ್ ಅಧ್ಯಕ್ಷರಾದ ಜ| ಪಿ. ಕೆ. ಅಬ್ದುಲ್ಲ,, NIM ಬೋಳಿಯಾರ್ ಸದರ್ ಉಸ್ತಾದ್ ಬಹು| ಶರೀಫ್ ಮದನಿ ಹಾಗೂ ಸಾಜಿದ್ ಯಮಾನಿ, ರವೂಫ್ ಇರ್ಫಾನಿ, ಬಾತೀಶ್ ಫೈಝಿ, ಮುಸ್ಲಿಹ್ ಯಮಾನಿ ಮತ್ತು ಸ್ವಾಲಿಹ್ ಹನೀಫಿ ಉಪಸ್ಥಿತರಿದ್ದರು.
ಅಲ್ಲದೆ, ಅಬ್ದುಲ್ ಖಾದರ್ C.A. (ಪ್ರಧಾನ ಕಾರ್ಯದರ್ಶಿ),MJM ಕಾರ್ಯದರ್ಶಿ ಜ| ಅಬ್ದುಲ್ ಶಕೂರ್, B.M. ಮಹಮ್ಮದ್ ಹನೀಫ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ B.K. ಅಬ್ದುಲ್ ಜಬ್ಬಾರ್, ಅಬೂಬಕ್ಕರ್ ಪೋಡಿಯಾ (ಸದಸ್ಯರು), SKSSF ಬೋಳಿಯಾರ್ ಅಧ್ಯಕ್ಷರಾದ ಮೊಹಮ್ಮದ್, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಯೂಸುಫ್, ಹಿರಿಯರಾದ ಹಮೀದ್ ಬೋಳಿಯಾರ್,ಅದ್ದುವಾಕ ದೇವರಗುಂಡಿ ಹಾಗೂ ಮೊಹಿದ್ದೀನ್ ಮದಕ, ಅಡ್ವಕೇಟ್ ಅಶ್ಫಾಕ್ ಬೋಳಿಯಾರ್, ವಿಖಾಯದ ಸಿದ್ದೀಕ್, ಅದ್ರಮಾಕ ಮತ್ತು ಸರ್ವಾನ್ ಬೋಳಿಯಾರ್,ಬಶೀರ್ ಕಾಪಿಕಾಡ್, ಅಶ್ರಫ್ ದೇವರಗುಂಡಿ ಸೇರಿದಂತೆ ಜಮಾಅತ್ ಸದಸ್ಯರು ಹಾಗೂ ಅಪಾರ ಸಂಖ್ಯೆಯ ದೀನಿ ಪ್ರೇಮಿಗಳು ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಿದರು.

ಇದೇ ರೀತಿ ಬೋಳಿಯಾರ್ ಜಂಕ್ಷನ್ನಲ್ಲಿ ಅಶ್ರಫ್ ಮೋನು ಬೋಳಿಯಾರ್ ಅವರು ಮಾತನಾಡಿ, “ಕಳೆದ ವರ್ಷ ನಮಗೆ ತಂಪು ಪಾನೀಯ ನೀಡಿ ಸಹಕರಿಸಿದ್ದ ಸಹೋದರ ಧರ್ಮದ ಸತೀಶ್ ಅವರು ಇಂದು ನಮ್ಮೊಂದಿಗಿಲ್ಲ” ಎಂದು ಈ ಸಂದರ್ಭದಲ್ಲಿ ಸ್ಮರಿಸಿ ಗೌರವ ಸಲ್ಲಿಸಿದರು.

