ಡಿಕೆಶಿ ಹೇಳಿಕೆ ಬೆನ್ನಲ್ಲೇ ‘ಕಾಣೆ’ಗೆ ಭಾರಿ ಡಿಮ್ಯಾಂಡ್: ಅಂಜಲ್ ಮೀನಿನ ರೇಟ್‌ಗೆ ಜಿಗಿದ ಕಾಣೆ, ಸೀಸನ್‌ನಲ್ಲೂ ರೇಟ್ ಡಬಲ್.
ಸಾಮಾಜಿಕ ಜಾಲತಾಣಗಳಲ್ಲಿ ನಾಯಕರು ಆಡುವ ಸಣ್ಣ ಮಾತುಗಳು ಮಾರುಕಟ್ಟೆಯ ಮೇಲೆ ಎಂಥಾ ಪ್ರಭಾವ ಬೀರಬಲ್ಲವು ಎಂಬುದಕ್ಕೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ.
ಮಂಗಳೂರಿನ ಗಾಂಧಿ ಸ್ಕ್ವೇರ್ ಕೆಫೆಯಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಜತೆ ಬ್ರೇಕ್ ಫಾಸ್ಟ್ ಸಂವಾದ ನಡೆಸುವಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ “ಯಾವ ಮೀನು ಇಷ್ಟ?” ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ತಡಮಾಡದೆ ಉತ್ತರಿಸಿದ ಡಿಕೆಶಿ, “ಕಾಣೆ ಮೀನಿನ ಟೇಸ್ಟ್ ಮುಂದೆ ಬೇರೆ ಯಾವ ಮೀನೂ ಮ್ಯಾಚ್ ಆಗಲ್ಲ, ಆದರೆ ನಾನೀಗ ಪ್ಯೂರ್ ವೆಜಿಟೀರಿಯನ್” ಎಂದಿದ್ದರು.
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕಾಣೆ ಮೀನಿಗೆ ದಿಢೀರ್ ಕ್ರೇಜ್ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಈ ಸೀಸನ್‌ನಲ್ಲಿ ಕೆಜಿಗೆ 700 ರಿಂದ 800 ರೂಪಾಯಿ ಇರಬೇಕಿದ್ದ ಕಾಣೆ ಮೀನಿನ ದರ, ಈಗ ಬೆಂಗಳೂರಿನ ಪದ್ಮನಾಭನಗರದ ‘ಫಿಶ್ ಮಾಂಗರ್ಸ್’ ನಂತಹ ಅಂಗಡಿಗಳಲ್ಲಿ ಏಕಾಏಕಿ 1100 ರಿಂದ 1200 ರೂಪಾಯಿಗೆ ಏರಿಕೆಯಾಗಿದ್ದು, ಜನಪ್ರಿಯ ಅಂಜಲ್ ಮೀನಿನಷ್ಟೇ ದುಬಾರಿಯಾಗಿದೆ. ಡಿಕೆಶಿ ಅವರ ಆ ಒಂದು ಮಾತು ಕರಾವಳಿಯಿಂದ ರಾಜಧಾನಿಯವರೆಗೂ ಕಾಣೆ ಮೀನಿನ ಬೆಲೆ ಕಾಯಿಸುವಂತೆ ಮಾಡಿದ್ದು, ವ್ಯಾಪಾರಿಗಳಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.



