ಬೋಳಿಯಾರಿನ ಗ್ರಾ.ಪಂ. ಮಾಜಿ ಸದಸ್ಯ ಮಾಧವ್ ಬೆಳ್ಚಡ ಅವರ ಪುತ್ರಿ ಪ್ರತೀಕ್ಷಾ ಎಂ. ವೈದ್ಯರಾಗಿ ಸಾಧನೆ: ಶುಭಾಶಯಗಳ ಮಹಾಪೂರ
ಬೋಳಿಯಾರ್: ಬೋಳಿಯಾರು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರು ಹಾಗೂ ಪ್ರಸಿದ್ಧ ಗುತ್ತಿಗೆದಾರರಾದ ಮಾಧವ ಬೆಳ್ಚಡ ಅವರ ಪುತ್ರಿ ಪ್ರತೀಕ್ಷಾ ಎಂ. ಅವರು ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ವೈದ್ಯರಾಗಿ ಅರ್ಹತೆ ಪಡೆದಿದ್ದಾರೆ.
ಮಾಧವ ಬೆಳ್ಚಡ ಅವರು ಬೋಳಿಯಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಸಾರ್ವಜನಿಕರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತಾ ಜನರ ಪ್ರೀತಿಗೆ ಪಾತ್ರರಾದವರು. ಈಗ ಅವರ ಪುತ್ರಿ ಪ್ರತೀಕ್ಷಾ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಈ ಗಮನಾರ್ಹ ಸಾಧನೆ ಮಾಡಿರುವುದು ಬೋಳಿಯಾರ್ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ.
ಪ್ರತೀಕ್ಷಾ ಅವರ ಈ ಸಾಧನೆಗೆ ಬೋಳಿಯಾರಿನ ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಬಡವರ ಮತ್ತು ಸಮಾಜದ ಸೇವೆಯಲ್ಲಿ ಪ್ರತೀಕ್ಷಾ ಅವರು ಮುನ್ನಡೆದು, ಅವರ ಉಜ್ವಲ ಭವಿಷ್ಯ ಹಾಗೂ ವೈದ್ಯಕೀಯ ಸೇವಾ ಪ್ರಯಾಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.


