Ur Kannada News

ಬಲ್ಮಠದಲ್ಲಿ ‘ಟ್ರಿವಿಯಂ ಲಾ ಅಸೋಸಿಯೇಟ್ಸ್’ ಶುಭಾರಂಭ:

ಮಂಗಳೂರು: ನಗರದ ಬಲ್ಮಠದಲ್ಲಿ ವಕೀಲರಾದ ಮೊಹಮ್ಮದ್ ಆದಿಲ್, ಅಯಾಜ್ ಚಾರ್ಮಾಡಿ ಹಾಗೂ ನಿಶಾನ್ ಎಂ.ಕೆ. ಅವರು ನೂತನವಾಗಿ ಆರಂಭಿಸಿರುವ ‘ಟ್ರಿವಿಯಂ ಲಾ ಅಸೋಸಿಯೇಟ್ಸ್’ ಕಚೇರಿಯ ಉದ್ಘಾಟನಾ ಸಮಾರಂಭವು ಇಂದು ನೆರವೇರಿತು.

ಈ ಶುಭ ಸಮಾರಂಭದಲ್ಲಿ ಧಾರ್ಮಿಕ ಗುರುಗಳು, ರಾಜ್ಯದ ಸಚಿವರು, ಹಿರಿಯ ಮತ್ತು ಕಿರಿಯ ವಕೀಲರು, ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಆರೋಗ್ಯ ಸಚಿವರಾದ ಯುಟಿ ಖಾದರ್ ಮಾತನಾಡಿ , “ಸಾರ್ವಜನಿಕರಿಗೆ ಶೀಘ್ರ ಹಾಗೂ ದಕ್ಷ ಕಾನೂನು ಸೇವೆ ಒದಗಿಸುವಲ್ಲಿ ಮತ್ತು ನ್ಯಾಯ ದೊರಕಿಸಿಕೊಡುವಲ್ಲಿ ಟ್ರಿವಿಯಂ ಲಾ ಅಸೋಸಿಯೇಟ್ಸ್ ಯಶಸ್ವಿಯಾಗಲಿ” ಎಂದು ಆಶೀರ್ವದಿಸಿ ಶುಭಕೋರಿದರು.

ಸಮಾರಂಭದಲ್ಲಿ ಭಾಗವಹಿಸಿದ್ದ ಹಿರಿಯ ನ್ಯಾಯವಾದಿಗಳು ಮಾತನಾಡಿ, ಸಂಸ್ಥೆಯ ಭವಿಷ್ಯದ ಬೆಳವಣಿಗೆಗೆ ಬೆಂಬಲ ವ್ಯಕ್ತಪಡಿಸಿದರು. ಕಚೇರಿಯ ಸಂಸ್ಥಾಪಕರಾದ ಅಯಾಜ್ ಚಾರ್ಮಾಡಿ ನಿಶಾನ್ ಎಂ.ಕೆ., ಮೊಹಮ್ಮದ್ ಆದಿಲ್ ಅವರು ಆಗಮಿಸಿದ ಎಲ್ಲಾ ಗಣ್ಯರನ್ನು ಗೌರವಿಸಿ, ಧನ್ಯವಾದ ಸಮರ್ಪಿಸಿದರು.

UR Kannada

UR Kannada News ಜನಪ್ರಿಯ ಡಿಜಿಟಲ್ ವಾರ್ತಾ ಮಾಧ್ಯಮ ಸಂಸ್ಥೆಯಾಗಿದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ, ಕ್ರೀಡೆ ಮನರಂಜನೆ ಸೇರಿದಂತೆ ಪ್ರಮುಖ ಹಾಗೂ ನಿಖರ ಸುದ್ದಿಗಳನ್ನು ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಸತ್ಯಸಂಧತೆ ಮತ್ತು ವಿಶ್ವಾಸಾರ್ಹ ಸುದ್ದಿಗಳೊಂದಿಗೆ ನಿಮ್ಮ ನೆಚ್ಚಿನ ವಾರ್ತಾ ತಾಣವಾಗಿ ನಾವು ನಿಮ್ಮೊಂದಿಗಿದ್ದೇವೆ.

Leave a Reply

Your email address will not be published. Required fields are marked *